alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ 649 ರೂ. ಪ್ಲಾನ್ ನಲ್ಲಿರುವವರಿಗೆ ಬಂಪರ್

ಟೆಲಿಕಾಂ ಸಂಸ್ಥೆಗಳು ಬೆಲೆ ಏರಿಸುವ ಪೈಪೋಟಿಯನ್ನು ಬಿಟ್ಟು, ಅಗ್ಗದ ಬೆಲೆಯಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡಲು ಮುಂದಾಗಿವೆ.

ವೊಡಾಫೋನ್, ಜಿಯೋ ಸೇರಿದಂತೆ ಮುಂಚೂಣಿಯ ಸಂಸ್ಥೆಗಳು ಪೋಸ್ಟ್ ಪೇಯ್ಡ್ ದರಗಳಲ್ಲಿ ವ್ಯತ್ಯಾಸ ಮಾಡಿದ್ದು, ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ.

ಡೇಟಾ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಏರ್ಟೆಲ್, ತನ್ನ 649 ರೂ. ಪೋಸ್ಟ್ ಪೇಯ್ಡ್ ಪ್ಲಾನ್ನಲ್ಲಿ ಕೊಂಚ ಬದಲಾವಣೆ ತಂದಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ಈವರೆಗೆ ಈ ಯೋಜನೆಯಲ್ಲಿ 60 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗುತ್ತಿತ್ತು. ಇನ್ನು ಮುಂದೆ 90 ಜಿಬಿ ಸಿಗಲಿದೆ.

399, 499, 799, 1,199 ರೂ.ಗಳ ಯೋಜನೆಯ ಜತೆಗೆ 649 ರೂ.ಗಳ ಪ್ಲಾನ್ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಏರ್ಟೆಲ್ ಹೇಳಿದೆ. 649 ರೂ. ಪ್ಲಾನ್ ಹೊರತುಪಡಿಸಿ, ಬೇರೆ ಯಾವುದೇ ಪ್ಲಾನ್ಗಳ ದರ ಅಥವಾ ಡೇಟಾ ಬದಲಾವಣೆ ಮಾಡಿಲ್ಲ.

649 ರೂ. ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, 60 ಜಿಬಿ ಡೇಟಾ, ತಿಂಗಳಲ್ಲಿ ಬಳಕೆಯಾಗದ ಡೇಟಾ ಮುಂದಿನ ತಿಂಗಳಿನ ಪ್ಯಾಕ್ಗೆ ಸೇರಿಕೊಂಡಿದೆ. ಅಮೆಜಾನ್ ಪ್ರೈಮ್, ಏರ್ಟೆಲ್ ಟಿವಿ ಹಾಗೂ ಹೆಡ್ಸೆಟ್ ಪ್ರೊಟೆಕ್ಷನ್, ವಿಂಕ್ ಮ್ಯೂಸಿಕ್ಗಳಿಗೆ 1 ವರ್ಷದವರೆಗಿನ ಸಬ್ಕ್ರಿಪ್ಶನ್ ಸಹ ಈ ಯೋಜನೆಯಲ್ಲಿ ಸೇರಿಕೊಂಡಿದೆ. ಕಳೆದ ತಿಂಗಳು ವೊಡಾಫೋನ್ ಹಾಗೂ ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್ಗಳಲ್ಲಿ ಬದಲಾವಣೆ ತಂದಿತ್ತು. ಈ ಹಿನ್ನೆಲೆಯಲ್ಲಿ ಏರ್ಟೆಲ್ ಸಂಸ್ಥೆಯೂ ತನ್ನ ಗ್ರಾಹಕರಿಗೆ ಖುಷಿ ಸಂಗತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...