alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಈ ಪ್ಲಾನ್ ನಲ್ಲಿ ಪ್ರತಿ ದಿನ ನೀಡ್ತಿದೆ 1.4 ಜಿಬಿ ಡೇಟಾ

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಗ್ರಾಹಕರಿಗಾಗಿ ಹೊಸ ಅಗ್ಗದ ಯೋಜನೆ ಜಾರಿಗೆ ತಂದಿದೆ. 219 ರೂಪಾಯಿ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ವೈಸ್ ಕಾಲ್ ಹಾಗೂ 1.4 ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ. ಏರ್ಟೆಲ್ ನ ಈ ಅಗ್ಗದ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿರಲಿದೆ.

ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ 100 ಎಸ್ ಎಂಎಸ್, ಅನಿಯಮಿತ ವೈಸ್ ಕಾಲ್ ಹಾಗೂ 39.2 ಜಿಬಿ ಡೇಟಾ ನೀಡಲಿದೆ. ಇದ್ರ ಜೊತೆಗೆ ಏರ್ಟೆಲ್ ಅನಿಯಮಿತ ಹಲೋ ಟ್ಯೂನ್ ನೀಡಲಿದೆ. ಇದ್ರ ಜೊತೆಗೆ ಏರ್ಟೆಲ್ 199 ಪ್ಲಾನ್ ಕೂಡ ಶುರು ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ಯಾವುದೇ ಸಿಗ್ತಿಲ್ಲ. ಹಲೋ ಟ್ಯೂನ್ ಕೂಡ ನೀಡ್ತಿಲ್ಲ.

ಜಿಯೋದ 149 ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ 219 ಯೋಜನೆ ಶುರು ಮಾಡಿದೆ ಎನ್ನಲಾಗ್ತಿದೆ. ಜಿಯೋ 149 ಪ್ಲಾನ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ನೀಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...