alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಟೆಲ್ ನೀಡ್ತಿದೆ ಮತ್ತೊಂದು ಭರ್ಜರಿ ಆಫರ್

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. 448 ರೂ. ಗೆ ಅನಿಯಮಿತ  ಕರೆ ಮತ್ತು ದಿನಕ್ಕೆ 1 ಜಿ.ಬಿ. ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ.

ರಿಲಯನ್ಸ್ ಜಿಯೊ 399 ರೂ. ಪ್ಲಾನ್ ಎದುರಿಸಲು ಏರ್ ಟೆಲ್ ಹೊಸ 448 ರೂ. ಯೋಜನೆಯನ್ನು ಹೊರತಂದಿದೆ. ಆಯ್ದ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಯೋಜನೆ ಮಾನ್ಯವಾಗಿದೆ.

ಇತ್ತೀಚಿನ 448 ರೂ. ಟ್ಯಾರಿಫ್ ಪ್ಲಾನ್ ಯೋಜನೆ ಹೊಂದಿರುವ ಏರ್ ಟೆಲ್ ಪ್ರೀಪೇಯ್ಡ್ ಚಂದಾದಾರರು ದಿನಕ್ಕೆ 1 ಜಿ.ಬಿ. 3 ಜಿ ಅಥವಾ 4 ಜಿ ಡೇಟಾವನ್ನು 70 ದಿನಗಳವರೆಗೆ ಪಡೆದುಕೊಳ್ಳುತ್ತಾರೆ. ಈ ಅವಧಿಗೆ ಒಟ್ಟು 70 ಜಿ.ಬಿ. ಡೇಟಾ ದಿನಕ್ಕೆ 1 ಮೀರಿದ ಬಳಿಕ ಡೇಟಾ ವೇಗವು 64 kbps ಗೆ ಇಳಿಯುತ್ತದೆ.

ಇದರಲ್ಲಿ ಏರ್ ಟೆಲ್ ಧ್ವನಿ ಕರೆ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತಿದೆ. ಆದಾಗ್ಯೂ ಧ್ವನಿ ಕರೆಗಳು ದಿನಕ್ಕೆ 300 ನಿಮಿಷ, ವಾರಕ್ಕೆ 1200 ನಿಮಿಷಗಳವರೆಗೆ ಸೀಮಿತವಾಗಿವೆ. ಜೊತೆಗೆ ಯೋಜನೆಯು ದಿನಕ್ಕೆ 100 ಎಸ್.ಎಂ.ಎಸ್. ಉಚಿತವಾಗಿ ನೀಡಲಿದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ MyAirtel ಅಪ್ಲಿಕೇಷನ್ ಮೂಲಕ ಪ್ರವೇಶಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...