alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 7900 ರೂ.ಗೆ ಸಿಗ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 9

ಸ್ಮಾರ್ಟ್ಫೋನ್ ನಿರ್ಮಾಣ ಕಂಪನಿ ಸ್ಯಾಮ್ಸಂಗ್ ತನ್ನ ಹೊಸ ಸ್ಮಾರ್ಟ್ಫೋನ್ ಗ್ಯಾಲಕ್ಸಿ ನೋಟ್ 9 ಬಿಡುಗಡೆ ಮಾಡಿದೆ. ಭಾರತದಲ್ಲಿ ಇದ್ರ ಮಾರಾಟ ಆಗಸ್ಟ್ 22 ರಿಂದ ಶುರುವಾಗಲಿದೆ. ಈ ಪ್ರೀಮಿಯಂ ಫೋನ್ ನಲ್ಲಿ ಅತ್ಯುತ್ತಮ ಬ್ಯಾಟರಿ ಜೊತೆ ಗೇಮ್ಸ್ ಆಡುವವರಿಗಾಗಿ ತ್ವರಿತ ಕೂಲಿಂಗ್ ವ್ಯವಸ್ಥೆ ನೀಡಲಾಗಿದೆಯಂತೆ.

ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 9 ಬೆಲೆ 67,990 ರೂಪಾಯಿ. ನೀವು ಈ ಫೋನನ್ನು ಕೇವಲ 7900 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್ಫೋನ್ 6.4 ಇಂಚಿನ qHD ಪ್ಲಸ್ ಸೂಪರ್ AMOLED ಡಿಸ್ಪ್ಲೇ ಜೊತೆ ಬರ್ತಿದೆ. 6GB/8GB ರ್ಯಾಮ್ ಹಾಗೂ 128GB/512GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯಿದೆ.

6ಜಿಬಿ ರ್ಯಾಮ್ ಮೊಬೈಲ್ ಬೆಲೆ 67,990 ರೂಪಾಯಿ. 8ಜಿಬಿ ರ್ಯಾಮ್ ಮೊಬೈಲ್ ಬೆಲೆ 84,900 ರೂಪಾಯಿ. ಆಗಸ್ಟ್ 10ರಿಂದಲೇ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಆಗಸ್ಟ್ 21ರವರೆಗೆ ಅವಕಾಶವಿದೆ.

ಗ್ಯಾಲಕ್ಸಿ ನೋಟ್ 9, 128 ಇಂಟರ್ನಲ್ ಸ್ಟೋರೇಜ್ ಹೊಂದಿರುವ ಮೊಬೈಲನ್ನು ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ ಖರೀದಿ ಮಾಡಬಹುದಾಗಿದೆ. ಇಲ್ಲಿ 7900 ರೂಪಾಯಿ ಹಣ ನೀಡಿ ನೀವು ಮೊಬೈಲ್ ಖರೀದಿ ಮಾಡಬಹುದು. ಇಎಂಐ ರೂಪದಲ್ಲಿ ಉಳಿದ ಹಣವನ್ನು ಸಂದಾಯ ಮಾಡಬೇಕಾಗುತ್ತದೆ. ಇದ್ರ ಜೊತೆ ಗ್ರಾಹಕರಿಗೆ ಏರ್ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 100 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...