alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಟೆಲ್ ನೀಡ್ತಿದೆ ಕೇವಲ 49 ರೂ.ಗೆ ಡೈಲಿ 1 ಜಿ.ಬಿ. ಡೇಟಾ

ನವದೆಹಲಿ: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, 49 ರೂ.ಗೆ 1 ಜಿ.ಬಿ. ಡೇಟಾ ನೀಡಲಿದೆ.

ಅಂದ ಹಾಗೇ, ಈ ಪ್ಲಾನ್ ಆಯ್ದ ಗ್ರಾಹಕರಿಗೆ ಮಾತ್ರ ಸಿಗಲಿದೆ. 49 ರೂ. ಪ್ಲಾನ್ ನಲ್ಲಿ ದಿನ 1 ಜಿ.ಬಿ. 4 ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ನೀಡಲಾಗುವುದು. ಮೈ ಏರ್ ಟೆಲ್ ಆಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಇದಲ್ಲದೇ, ಏರ್ ಟೆಲ್ ಗ್ರಾಹಕರಿಗೆ 98 ರೂ., ಮತ್ತು 146 ರೂ. ಪ್ಲಾನ್ ಗಳನ್ನು ಪರಿಚಯಿಸಿದ್ದು, 98 ರೂ. ಯೋಜನೆಯಡಿ 2 ಜಿ.ಬಿ. ಡೇಟಾವನ್ನು 5 ದಿನಗಳವರೆಗೆ ನೀಡಲಿದೆ.

ಹೆಚ್ಚಿನ ಡೇಟಾವನ್ನು ಹೊಂದುವ ಬಳಕೆದಾರರಿಗೆ ಏರ್ ಟೆಲ್ 349 ರೂ., 549 ರೂ. ಸೇರಿದಂತೆ ಹಲವು ಪ್ರೀಪೇಯ್ಡ್ ಯೋಜನೆ ಪರಿಚಯಿಸಲಾಗಿದೆ. ಈ ಎಲ್ಲಾ ಯೋಜನೆಗಳ ಅಡಿಯಲ್ಲಿ ಬಳಕೆದಾರರು ಅನಿಯಮಿತ ಉಚಿತ ಕರೆ ಸೌಲಭ್ಯ, ನಿಗದಿತ ಡೇಟಾ(ದಿನ 2 ಜಿ.ಬಿ., 3 ಜಿ.ಬಿ., 3.5 ಜಿ.ಬಿ.) ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...