alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ 419 ರೂ. ಪ್ಲಾನ್ ನಲ್ಲಿ ಸಿಗ್ತಿದೆ 105 ಜಿಬಿ ಡೇಟಾ

ಟೆಲಿಕಾಂ ಕಂಪನಿ ಏರ್ಟೆಲ್ ಹಾಗೂ ಜಿಯೋ ನಡುವೆ ಆಫರ್ ಯುದ್ಧ ಮುಂದುವರೆದಿದೆ. ಇತ್ತೀಚೆಗಷ್ಟೇ ಜಿಯೋ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈ ವೇಳೆ ಮುಕೇಶ್ ಅಂಬಾನಿ ಗ್ರಾಹಕರಿಗೆ ಮುಕ್ತ ಡೇಟಾ ನೀಡುವ ಘೋಷಣೆ ಮಾಡಿದ್ದಲ್ಲದೆ ಹೊಸ ಯೋಜನೆಗಳ ಭರವಸೆ ನೀಡಿದ್ದಾರೆ. ಜಿಯೋ ಪ್ರತಿಸ್ಪರ್ಧಿ ಏರ್ಟೆಲ್ ಸುಮ್ಮನೆ ಕುಳಿತಿಲ್ಲ. ಏರ್ಟೆಲ್ ಭರ್ಜರಿ ಆಫರ್ ಶುರು ಮಾಡಿದೆ. ಏರ್ಟೆಲ್ ನ 419 ಯೋಜನೆ ಮಾರುಕಟ್ಟೆಯಲ್ಲಿ ಧಮಾಲ್ ಮಾಡ್ತಿದೆ.

ಏರ್ಟೆಲ್ ಈ 419 ಯೋಜನೆಯಲ್ಲಿ 105 ಜಿಬಿ ಡೇಟಾ ನೀಡ್ತಿದೆ. 75 ದಿನಗಳ ಸಿಂಧುತ್ವದ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ 1.4 ಜಿಬಿ ಡೇಟಾ ಸಿಗಲಿದೆ. ಕಂಪನಿ ವೆಬ್ಸೈಟ್ ಅಥವಾ ಆ್ಯಪ್ ಸಹಾಯದಿಂದ ಗ್ರಾಹಕರು ಈ ಪ್ಲಾನ್ ರಿಚಾರ್ಜ್ ಮಾಡಬಹುದಾಗಿದೆ.

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಸಿಗಲಿದೆ. 300 ನಿಮಿಷದವರೆಗೆ ಉಚಿತವಾಗಿ ಕರೆ ಮಾಡಬಹುದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಉಚಿತವಾಗಿ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ಏರ್ಟೆಲ್ ಟಿವಿ ಆ್ಯಪ್ ಹಾಗೂ ವಿಂಕ್ ಮ್ಯೂಸಿಕ್ ಚಂದಾದಾರತ್ವ ಕೂಡ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...