alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಗೆ 1 ವರ್ಷ ಏರ್ ಟೆಲ್ ಫ್ರೀ ಡೇಟಾ

air-micro

ನವದೆಹಲಿ: ಮೊಬೈಲ್ ಸೇವಾ ಕಂಪನಿಗಳ ಪೈಪೋಟಿಯಲ್ಲಿ ಗ್ರಾಹಕರಿಗೆ ಲಾಭವೇ ಆಗುತ್ತಿದೆ. ಮೈಕ್ರೋ ಮ್ಯಾಕ್ಸ್ ಫೋನ್ ಖರೀದಿಸುವ ಗ್ರಾಹಕರಿಗೆ 1 ವರ್ಷ ಏರ್ ಟೆಲ್ ನಿಂದ ಫ್ರೀ ಡೇಟಾ ಹಾಗೂ ಕರೆ ಸೌಲಭ್ಯ ಸಿಗಲಿದೆ.

ಮೈಕ್ರೋ ಮ್ಯಾಕ್ಸ್ ನಿಂದ ಕ್ಯಾನ್ ವಾಸ್ 2 ಸ್ಮಾರ್ಟ್ ಫೋನ್ ರಿಲೀಸ್ ಮಾಡಿದ್ದು, ಈ ಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರಿಗೆ ಅನ್ ಲಿಮಿಟೆಡ್ ಕರೆ ಹಾಗೂ ಡೇಟಾ ಸೌಲಭ್ಯವನ್ನು ನೀಡಲಾಗುತ್ತದೆ.

ಆದರೆ, ಮಾಹಿತಿಯ ಅನ್ವಯ ಪ್ರತಿ ದಿನ 1 ಜಿಬಿ 4 ಜಿ ಡೇಟಾ ಸಿಗಲಿದ್ದು, ಬಳಿಕ ಇಂಟರ್ ನೆಟ್ ಸ್ಪೀಡ್ ಕಡಿಮೆಯಾಗುತ್ತದೆ. ಇನ್ನು ಪ್ರತಿ ತಿಂಗಳು 600 ನಿಮಿಷ ಉಚಿತ ಕರೆ ಸೌಲಭ್ಯವಿರುತ್ತದೆ ಎನ್ನಲಾಗಿದೆ.

ಡ್ಯುಯೆಲ್ ಸಿಮ್ 4 ಜಿ VoLTE, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್, ಅಂಡ್ರಾಯಿಡ್ ನೌಗಾಟ್ ಆಪರೇಟಿಂಗ್ ಸಿಸ್ಟಂ, 3050 ಎ.ಎಂ.ಹೆಚ್. ಬ್ಯಾಟರಿ, 3 ಜಿ.ಬಿ. ರ್ಯಾಮ್, 16 ಜಿ.ಬಿ. ಇಂಟರ್ನಲ್ ಮೆಮೋರಿ, 64 ಜಿ.ಬಿ.ವರೆಗೂ ವಿಸ್ತರಣೆ ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಮೈಕ್ರೋ ಮ್ಯಾಕ್ಸ್ ಕ್ಯಾನ್ ವಾಸ್ 2 ಸ್ಮಾರ್ಟ್ ಫೋನ್ ಬೆಲೆ 11,999 ರೂ. ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...