alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 2000 ರೂ.ಗೆ ಸಿಗಲಿದೆ 4ಜಿ ಮೊಬೈಲ್

ರಿಲಾಯನ್ಸ್ ಜಿಯೋ 4ಜಿ ಫೀಚರ್ ಫೋನ್ 1500 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜಿಯೋ ಸಿಮ್ ಹಾಗೂ ಜಿಯೋ ಫೋನ್ ನಿಂದಾಗಿ ಏರ್ಟೆಲ್ ಕಂಪನಿಗೆ ಸಾಕಷ್ಟು ನಷ್ಟವುಂಟಾಗಿದೆ. ಇದು ಎಲ್ಲರಿಗೂ ಗೊತ್ತು. ಜಿಯೋ ಆಫರ್ ಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಕೂಡ ಸಾಕಷ್ಟು ಆಫರ್ ಗಳನ್ನು ಗ್ರಾಹಕರಿಗೆ ನೀಡಿದೆ. ಈಗ ರಿಲಾಯನ್ಸ್ ಜಿಯೋ ಫೀಚರ್ ಫೋನ್ ಗೆ ಟಕ್ಕರ್ ನೀಡಲು ಮುಂದಾಗಿದೆ.

ಯಸ್, ಏರ್ಟೆಲ್ 4ಜಿ ಫೋನ್ ಮಾರುಕಟ್ಟೆಗೆ ತರುವ ಸಿದ್ಧತೆಯಲ್ಲಿದೆ. ಮೂಲಗಳ ಪ್ರಕಾರ ಇದ್ರ ಬೆಲೆ 2 ಸಾವಿರಕ್ಕಿಂತ ಕಡಿಮೆ ಇರಲಿದೆ ಎನ್ನಲಾಗ್ತಿದೆ. ಏರ್ಟೆಲ್ ಸ್ವದೇಶಿ ಹ್ಯಾಂಡ್ಸೆಟ್ ತಯಾರಕ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ, ಮೂಲಗಳ ಪ್ರಕಾರ ಈ ಫೋನ್ ಮುಂದಿನ ತಿಂಗಳ ಆರಂಭದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗ್ತಿದೆ.

ಈ ಹಿಂದೆ ಏರ್ಟೆಲ್, ಚೀನಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ಫೀಚರ್ ಫೋನ್ 2500 ರೂಪಾಯಿಗೆ ಮಾರುಕಟ್ಟೆಗೆ ಬರಲಿದೆ ಎನ್ನಲಾಗ್ತಾ ಇತ್ತು. ಆದ್ರೀಗ 2 ಸಾವಿರಕ್ಕಿಂತ ಕಡಿಮೆ ಬೆಲೆಗೆ ಫೋನ್ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ. ಏರ್ಟೆಲ್ ಒಂದು ಟೆಲಿಕಾಂ ಕಂಪನಿ. ಹಾಗಾಗಿ ಹ್ಯಾಂಡ್ ಸೆಟ್ ಜೊತೆ ಕಂಪನಿ ಸಾಕಷ್ಟು ಆಫರ್ ನೀಡೋದು ನಿಶ್ಚಿತ. ಉಚಿತ ಕರೆ, ಡೇಟಾ ಸೇರಿದಂತೆ ಜಿಯೋಕ್ಕೆ ಟಕ್ಕರ್ ನೀಡುವ ಯೋಜನೆ ಬಿಡುಗಡೆ ಮಾಡಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...