alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಶುರು ಮಾಡಿದೆ ಹೋಂ ಬ್ರಾಡ್ಬ್ಯಾಂಡ್ ಸೇವೆ

ಟೆಲಿಕಾಂ ಕಂಪನಿ ಏರ್ಟೆಲ್ ಸೂಪರ್ ಫಾಸ್ಟ್ ಹೋಮ್ ಬ್ರಾಡ್ಬ್ಯಾಂಡ್ ಯೋಜನೆ ಶುರು ಮಾಡಿದೆ. ವೇಗದ ಇಂಟರ್ನೆಟ್ ಬಳಸುವವರಿಗಾಗಿ ಕಂಪನಿ ಈ ಪ್ಲಾನ್ ಆರಂಭಿಸಿದೆ. ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 300 ಎಂಬಿಪಿಎಸ್ ವೇಗದವರೆಗೆ ನೆಟ್ ಸ್ಪೀಡ್ ಸಿಗಲಿದೆಯಂತೆ.

ಈ ಯೋಜನೆ FTTH ಆಧಾರಿತವಾಗಿದೆ. ಈ ಯೋಜನೆ ಪಡೆದ ಗ್ರಾಹಕರು ಪ್ರತಿ ತಿಂಗಳು 2,199 ರೂಪಾಯಿ ನೀಡಬೇಕಾಗುತ್ತದೆ. ಏರ್ಟೆಲ್ ಗ್ರಾಹಕರಿಗೆ 1200GB ಅಲ್ಟ್ರಾ ಡೇಟಾ ನೀಡೋದಾಗಿ ಹೇಳಿದೆ. ಇದ್ರಲ್ಲಿ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆ ಕೂಡ ಸಿಗಲಿದೆ.

ಈ ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ಏರ್ಟೆಲ್ ಆ್ಯಪ್ ಉಚಿತವಾಗಿ ಸಿಗಲಿದೆ. ವಿಂಕ್ ಮ್ಯೂಸಿಕ್ ಹಾಗೂ ಏರ್ಟೆಲ್ ಟಿವಿ ಅಪ್ಲಿಕೇಷನ್ ಗ್ರಾಹಕರಿಗೆ ಸಿಗಲಿದೆ. ವಿಂಕ್ ಮ್ಯೂಸಿಕ್ ನಲ್ಲಿ 3 ಮಿಲಿಯನ್ ಗಿಂತಲೂ ಹೆಚ್ಚು ಹಾಡುಗಳಿವೆ. 350ಕ್ಕೂ ಹೆಚ್ಚು ಟಿವಿಗಳನ್ನು ಆ್ಯಪ್ ಮೂಲಕ ನೋಡಬಹುದಾಗಿದೆ. ವಿ ಫೈಬರ್ ಬ್ರಾಡ್ಬ್ಯಾಂಡ್ ಯಶಸ್ಸಿನ ನಂತ್ರ ಈಗ FTTH ಆಧಾರಿತ ಬ್ರಾಡ್ಬ್ಯಾಂಡ್ ಶುರು ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...