alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಬಾರಿ 5 ಭರ್ಜರಿ ಪ್ಲಾನ್ ಶುರು ಮಾಡ್ತು ಈ ಕಂಪನಿ

ಕೆಲ ದಿನಗಳ ನಂತ್ರ ಏರ್ಟೆಲ್ ಮತ್ತೆ ಟೆಲಿಕಾಂ ಕ್ಷೇತ್ರದಲ್ಲಿ ಧಮಾಲ್ ಮಾಡಲು ಹೊರಟಿದೆ. ಒಂದೇ ಬಾರಿ ಐದು ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಹೊಸದಾಗಿ ಸಿಮ್ ಖರೀದಿ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

ಈ ಯೋಜನೆಯ ಬೆಲೆ 178 ರೂಪಾಯಿಯಿಂದ 559 ರೂಪಾಯಿ. ಅನಿಯಮಿತ ಕರೆ ಜೊತೆ ಡೇಟಾ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. 178 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ದಿನ 1ಜಿಬಿ 4ಜಿ/3ಜಿ ಡೇಟಾ ಸಿಗಲಿದೆ. ಇದು 28 ದಿನಗಳ ಸಿಂಧುತ್ವ ಹೊಂದಿರಲಿದೆ. ಇದ್ರ ಜೊತೆಗೆ 100 ಎಸ್ಎಂಎಸ್ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ, ರೋಮಿಂಗ್ ಕರೆ ಸಿಗಲಿದೆ.

ಇನ್ನು 299 ರೂಪಾಯಿ ಪ್ಲಾನ್ ನಲ್ಲಿ 1.4 ಜಿಬಿ 4ಜಿ ಡೇಟಾ ಪ್ರತಿದಿನ ಸಿಗಲಿದೆ. 100 ಎಸ್ಎಂಎಸ್ ಹಾಗೂ ಅನಿಯಮಿತ ಕರೆ ಜೊತೆ ಇದು 28 ದಿನಗಳ ಸಿಂಧುತ್ವ ಹೊಂದಿರಲಿದೆ.

28 ದಿನಗಳ ಸಿಂಧುತ್ವದ 344 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ ಗ್ರಾಹಕರಿಗೆ 2 ಜಿಬಿ ಡೇಟಾ ಸಿಗಲಿದೆ. ರೋಮಿಂಗ್ ಸಮೇತ ಅನಿಯಮಿತ ಕರೆ ಹಾಗೂ ಎಸ್ಎಂಎಸ್ ಸಿಗಲಿದೆ.

ಇನ್ನು 495 ರೂಪಾಯಿ ಪ್ಲಾನಿನಲ್ಲಿ 1.5 ಜಿಬಿ ಡೇಟಾ ಪ್ರತಿದಿನ ಸಿಗಲಿದೆ. ಇದು 84 ದಿನಗಳ ಸಿಂಧುತ್ವ ಹೊಂದಿದೆ. 100 ಎಸ್ಎಂಎಸ್ ಜೊತೆ ಅನಿಯಮಿತ ಕರೆ ಲಭ್ಯವಾಗಲಿದೆ.

ಕೊನೆಯದಾಗಿ 559 ಯೋಜನೆಯಲ್ಲಿ ಗ್ರಾಹಕರಿಗೆ 1.4 ಜಿಬಿ ಡೇಟಾ ಜೊತೆ 90 ದಿನಗಳ ಕಾಲ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...