alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಆವೃತ್ತಿಯಲ್ಲಿ ಹೊಸ ಪ್ಲಾನ್ ಹೊತ್ತು ತಂದ ಏರ್ಟೆಲ್

ಏರ್ಟೆಲ್ ಮತ್ತೊಮ್ಮೆ ಐಪಿಎಲ್ ಆವೃತ್ತಿಗಾಗಿ ಹೊಸ ಪ್ಲಾನ್ ಶುರು ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಹೈ ಸ್ಪೀಡ್ 2 ಜಿಬಿ ಡೇಟಾ ಸಿಗಲಿದೆ. ಇದ್ರ ಜೊತೆಗೆ ಅನಿಯಮಿತ ಕಾಲಿಂಗ್ ಸೇವೆ ಕೂಡ ಲಭ್ಯವಾಗಲಿದೆ.

ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ನೀಡ್ತಿದೆ. ಈ ಪ್ಲಾನ್ 28 ದಿನ ಸಿಂಧುತ್ವ ಹೊಂದಿರಲಿದೆ. ಇದ್ರಲ್ಲಿ ಪೂರ್ತಿ 56 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ನ ಬೆಲೆ 249 ರೂಪಾಯಿಯಾಗಿದೆ. ಈ ಪ್ಲಾನ್ ಜೊತೆ ಕಂಪನಿ ತನ್ನ 349 ರೂಪಾಯಿ ಪ್ಲಾನ್ ಅಪ್ಡೇಟ್ ಮಾಡಿದೆ.

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ ಹೈಸ್ಪೀಡ್ 3 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕಾಲಿಂಗ್, 100 ಎಸ್ಎಂಎಸ್ ಕೂಡ ಸಿಗಲಿದೆ. 28 ದಿನಗಳ ಸಿಂಧುತ್ವ ಹೊಂದಿರುವ ಈ ಪ್ಲಾನ್ ನಲ್ಲಿ ಪೂರ್ತಿ 84 ಜಿಬಿ ಡೇಟಾ ಲಭ್ಯವಾಗಲಿದೆ. ಈ ಹಿಂದೆ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2.5 ಜಿಬಿ ಡೇಟಾ ಸಿಗ್ತಿತ್ತು.

ಏರ್ಟೆಲ್ ಬಳಕೆದಾರರು ಯಾವುದೇ ಐಪಿಎಲ್ ಪಂದ್ಯವನ್ನು ಲೈವ್ ವೀಕ್ಷಣೆ ಮಾಡಬಹುದಾಗಿದೆ. ಐಪಿಎಲ್ ಲೈವ್ ಏರ್ಟೆಲ್ ಟಿವಿಯಲ್ಲಿ ಪ್ರಸಾರವಾಗ್ತಿದೆ. ಇದಕ್ಕಾಗಿ ಕಂಪನಿ ಬೇರೆ ವಿಭಾಗ ಮಾಡಿದೆ. ಆ್ಯಪ್ ಅಪ್ಡೇಟ್ ಮಾಡಿದಲ್ಲಿ ನಿಮಗೆ ಏರ್ಟೆಲ್ ಟಿವಿ ಸಿಗಲಿದೆ. ಅದ್ರಲ್ಲಿ ಐಪಿಎಲ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...