alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 9 ರೂ.ಗೆ ಮಾಡಿ ಅನಿಯಮಿತ ಕರೆ,ಇಂಟರ್ನೆಟ್ ಬಳಕೆ

ಟೆಲಿಕಾಂ ಕಂಪನಿಗಳ ಮಧ್ಯೆ ಅಗ್ಗದ ಪ್ಲಾನ್ ಯುದ್ಧ ಮುಂದುವರೆದಿದೆ. ಟೆಲಿಕಾಂ ಕಂಪನಿಗಳು ಅಗ್ಗದ ಪ್ಲಾನ್ ಜಾರಿಗೆ ತಂದು ಗ್ರಾಹಕರನ್ನು ಸೆಳೆಯುತ್ತಿವೆ. ಈಗ ಏರ್ಟೆಲ್ ಮತ್ತೊಂದು ಅಗ್ಗದ ಯೋಜನೆ ಶುರು ಮಾಡಿದೆ.

ಏರ್ಟೆಲ್ ನ 9 ರೂಪಾಯಿಯ ಈ ಪ್ಲಾನ್ ನಲ್ಲಿ ಅನಿಯಮಿತ ಕಾಲಿಂಗ್ ಜೊತೆ 100 ಎಸ್ಎಂಎಸ್ ಜೊತೆ 100 ಎಂಬಿ ಡೇಟಾ ಸಿಗಲಿದೆ. ಇದಲ್ಲದೆ ವೋಡಾಫೋನ್ ಕೂಡಾ ಅಗ್ಗದ ಯೋಜನೆ ಶುರು ಮಾಡಿದೆ. ವೋಡಾಫೋನ್ ಹೊಸ ಪ್ಲಾನ್ ಬೆಲೆ ಕೂಡ 9 ರೂಪಾಯಿ. ಇದ್ರಲ್ಲಿ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ.

ವೋಡಾಫೋನ್ ಕೂಡ 9 ರೂಪಾಯಿ ಪ್ಲಾನ್ ನಲ್ಲಿ 100 ಎಂಬಿ ಹೈಸ್ಪೀಡ್ ಇಂಟರ್ನೆಟ್ ನೀಡ್ತಿದೆ. ಈ ಯೋಜನೆಯಡಿ ಗ್ರಾಹಕರು ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಆದ್ರೆ ಈ ಸೌಲಭ್ಯ ಉತ್ತರ ಪ್ರದೇಶದ ಗ್ರಾಹಕರಿಗೆ ಮಾತ್ರ ಲಭ್ಯವಿದೆ.

ಏರ್ಟೆಲ್ ಮಾತ್ರ 9 ರೂಪಾಯಿ ಪ್ಲಾನನ್ನು ಇಡೀ ಭಾರತದ ಗ್ರಾಹಕರಿಗೆ ನೀಡ್ತಿದೆ. ಇದ್ರ ಜೊತೆಗೆ ಏರ್ಟೆಲ್ 499 ರೂಪಾಯಿ ಪ್ಲಾನ್ ಕೂಡ ಬಿಡುಗಡೆ ಮಾಡಿದೆ. 140 ಜಿಬಿ ಡೇಟಾವನ್ನು ಗ್ರಾಹಕರು ಈ ಪ್ಲಾನ್ ನಲ್ಲಿ ಪಡೆಯಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...