alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 45 ದಿನಗಳವರೆಗೆ ಉಚಿತ ಕರೆ

ಏರ್ಟೆಲ್ 299 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಶುರು ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ 45 ದಿನಗಳ ಕಾಲ ಉಚಿತ ಧ್ವನಿ ಕರೆ ಸಿಗಲಿದೆ. ವರದಿ ಪ್ರಕಾರ ಉಚಿತ ಕರೆ ಜೊತೆ ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 100 ಎಸ್ ಎಂ ಎಸ್ ನೀಡಲಿದೆಯಂತೆ.

299 ರೂಪಾಯಿ ಪ್ಲಾನ್ ನಲ್ಲಿ ರೋಮಿಂಗ್ ವೇಳೆಯೂ ಗ್ರಾಹಕರಿಗೆ 100 ಎಸ್ ಎಂ ಎಸ್ ಸಿಗಲಿದೆ. ಏರ್ಟೆಲ್ ಗ್ರಾಹಕರು ಟಾಕ್ಟೈಮ್ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಜಿಯೋದಂತೆ ಏರ್ಟೆಲ್ ನಲ್ಲಿ ಕೂಡ ಅನಿಯಮಿತ ಕಾಲಿಂಗ್ ಎಫ್ ಯು ಪಿ ಇಲ್ಲದೆ ಸಿಗ್ತಿದೆ. ಏರ್ಟೆಲ್ 299 ರೂಪಾಯಿ ಪ್ಲಾನ್ ಜೊತೆ ಪ್ರಿಪೇಯ್ಡ್ ಗ್ರಾಹಕರಿಗೆ 249 ರೂ., 349 ರೂಪಾಯಿ ಪ್ಲಾನ್ ಕೂಡ ಶುರು ಮಾಡಿದೆ. ಆದ್ರೆ ಈ ಎರಡು ಪ್ಲಾನ್ ಗಳಲ್ಲಿ ಗ್ರಾಹಕರು ಉಚಿತ ಕರೆ ಲಾಭವನ್ನು ಕೇವಲ 28 ದಿನಗಳವರೆಗೆ ಮಾತ್ರ ಪಡೆಯಬಹುದಾಗಿದೆ.

ಏರ್ಟೆಲ್ 1, 199 ರೂಪಾಯಿ ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದೆ. ಈ ಹಿಂದೆ 90 ಜಿಬಿ ಡೇಟಾ ಈ ಪ್ಲಾನ್ ನಲ್ಲಿ ಸಿಗ್ತಿತ್ತು. ಇನ್ಮುಂದೆ 120 ಜಿಬಿ ಡೇಟಾ ಸಿಗಲಿದೆ. ವೋಡಾಫೋನ್ ನ 1299 ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ 1, 199 ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...