alex Certify
ಕನ್ನಡ ದುನಿಯಾ       Mobile App
       

Kannada Duniya

399 ರೂ.ಗೆ ಏರ್ಟೆಲ್ ನೀಡ್ತಿದೆ ಬಂಪರ್ ಆಫರ್

airtel

ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ಯೋಜನೆಗಳ ಸರಣಿ ಮುಂದುವರೆದಿದೆ. ಈ ಮಧ್ಯೆ ಏರ್ಟೆಲ್ 4ಜಿ ಬಳಕೆದಾರರಿಗಾಗಿ ಬಂಪರ್ ಆಫರ್ ಶುರುಮಾಡಿದೆ. ಕಂಪನಿ ತನ್ನ ಪ್ರಿಪೇಡ್ ಬಳಕೆದಾರರಿಗಾಗಿ 399 ರೂಪಾಯಿ ಪ್ಲಾನ್ ಶುರುಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರು 84 ದಿನಗಳ ಕಾಲ 84ಜಿಬಿ ಡೇಟಾ ಜೊತೆಗೆ ಉಚಿತ ಕರೆ ಮಾಡಬಹುದಾಗಿದೆ.

ಏರ್ಟೆಲ್ ಮಾಹಿತಿ ಪ್ರಕಾರ ಈ ಯೋಜನೆ ಕೇವಲ 4ಜಿ ಫೋನ್ ಹಾಗೂ 4ಜಿ ಸಿಮ್ ಬಳಕೆದಾರರಿಗೆ ಮಾತ್ರ ಸೀಮಿತ. ಇದ್ರ ಜೊತೆಗೆ ಕಂಪನಿ ಇನ್ನೊಂದು ಆಫರ್ ನೀಡ್ತಾ ಇದೆ. ಇದ್ರಲ್ಲಿ 244 ರೂಪಾಯಿ ರಿಚಾರ್ಜ್ ಮಾಡಿದ್ರೆ ಗ್ರಾಹಕರು 70 ದಿನಗಳವರೆಗೆ 1ಜಿಬಿ ಡೇಟಾ ಜೊತೆಗೆ ಉಚಿತ ಕರೆ ಸೌಲಭ್ಯ ಪಡೆಯಲಿದ್ದಾರೆ.

ಇದಕ್ಕೂ ಮೊದಲು ಈ ತಿಂಗಳು ಉಳಿದ ಬಾಕಿ ಡೇಟಾವನ್ನು ಮುಂದಿನ ತಿಂಗಳು ಬಳಸುವ ಅವಕಾಶವನ್ನು ಗ್ರಾಹಕರಿಗೆ  ಕಂಪನಿ ನೀಡಿತ್ತು. ರಿಲಾಯನ್ಸ್ ಜಿಯೋ ಅಗ್ಗದ ಯೋಜನೆ ಶುರುಮಾಡಿದ ನಂತ್ರ ಉಳಿದ ಕಂಪನಿಗಳು ಅಗ್ಗದ ಆಫರ್ ನೀಡಲು ಆರಂಭಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...