alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಕೊಡುಗೆ

airtel-offer-10gb-4g-data-at-rs-250-with-samsung-galaxy-j-series-smartphones

ನವದೆಹಲಿ: ಏರ್ ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದೆ. ಇನ್ನು ಏರ್ ಟೆಲ್ ಪ್ರಿಪೇಡ್ ಗ್ರಾಹಕರಿಗೆ 250 ರೂಪಾಯಿಗಳಿಗೆ 10 ಜಿಬಿಯ 4 ಜಿ ಡಾಟಾ ಸಿಗಲಿದೆ.

ರಿಲಾಯೆನ್ಸ್ ಜಿಯೋ ಲಾಂಚ್ ಆಗುವ ಮೊದಲು 4ಜಿ ಡಾಟಾ ದರದ ಕುರಿತಂತೆ ಎಲ್ಲ ಟೆಲಿಕಾಂ ಕಂಪನಿಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಐಡಿಯಾ, ವಡಾಫೋನ್ ಸೇರಿದಂತೆ ಎಲ್ಲ ಕಂಪನಿಗಳೂ ಗ್ರಾಹಕರಿಗೆ ಅನೇಕ ರೀತಿಯ ಆಕರ್ಷಕ ಕೊಡುಗೆಗಳನ್ನು ನೀಡಲು ಆರಂಭಿಸಿದ್ದವು. ಈ ನಿಟ್ಟಿನಲ್ಲಿ ಈಗ ಏರ್ ಟೆಲ್ ಕೂಡ ಹೊಸ ಆಫರ್ ನೀಡಿದೆ. ಸ್ಯಾಮ್ ಸಂಗ್ ಗೆಲ್ಯಾಕ್ಸಿ ಜೆ ಸಿರೀಸ್ ಸ್ಮಾರ್ಟ್ ಫೋನ್ ಬಳಕೆದಾರರು ಈ ಆಫರ್ ನ ಲಾಭ ಪಡೆದುಕೊಳ್ಳಬಹುದು.

ಸ್ಯಾಮ್ ಸಂಗ್ ಜೆ ಸಿರೀಸ್ ಸ್ಮಾರ್ಟ್ ಫೋನ್ ಬಳಕೆದಾರರು ಹತ್ತಿರದ ಏರ್ ಟೆಲ್ ರಿಟೇಲ್ ಶಾಪ್ ಗೆ ತೆರಳಿ ಈ ಆಫರ್ ನ ಲಾಭ ಪಡೆಯಬಹುದಾಗಿದೆ. ಇದರ ಹೊರತಾಗಿ ಏರ್ ಟೆಲ್ ಮೊಬೈಲ್ ಇಂಟರ್ನೆಟ್ ಬಳಸಿ ಕಂಪನಿಯ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ಸ್ಕೀಮ್ ಎಕ್ಟಿವೇಟ್ ಮಾಡಿಕೊಳ್ಳಬಹುದು. ಇದರ ಹೊರತಾಗಿ ಯಾವ ಯಾವ ಮೊಬೈಲ್ ಗಳ ಮೇಲೆ ಈ ಆಫರ್ ಲಭ್ಯವಿದೆ ಎಂಬುದನ್ನು ಕಂಪನಿ ಬಹಿರಂಗಗೊಳಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...