alex Certify
ಕನ್ನಡ ದುನಿಯಾ       Mobile App
       

Kannada Duniya

448 ರೂ.ಗೆ 70 ಜಿಬಿ ಡೇಟಾ ನೀಡ್ತಿದೆ ಈ ಕಂಪನಿ

ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಹೊಸ ಪ್ಲಾನ್ ಶುರುಮಾಡಿದೆ. ಈ ಯೋಜನೆಯನ್ನು ಇನ್ಫಿನಿಟಿ ಪೋಸ್ಟ್ ಪೇಡ್ ಅಡಿಯಲ್ಲಿ ನೀಡಲಾಗಿದೆ. ಕಂಪನಿ ಪೋಸ್ಟ್ ಪೇಡ್ ಹಾಗೂ ಪ್ರೀಪೇಡ್ ಎರಡು ಪ್ಲಾನ್ ಶುರು ಮಾಡಿದೆ. ರಿಲಾಯನ್ಸ್ ಜಿಯೋಗೆ ಟಕ್ಕರ್ ನೀಡಲು ಕಂಪನಿ ಈ ಪ್ಲಾನ್ ಆರಂಭಿಸಿದೆ. ಕೆಲ ದಿನಗಳ ಹಿಂದಷ್ಟೇ ಜಿಯೋ ತನ್ನ ಯೋಜನೆಯನ್ನು ದುಬಾರಿ ಮಾಡಿದೆ. ಇದ್ರ ಲಾಭ ಪಡೆದು ಗ್ರಾಹಕರನ್ನು ತನ್ನತ್ತ ಸೆಳೆಯುವುದು ಏರ್ಟೆಲ್ ಮುಖ್ಯ ಗುರಿಯಾಗಿದೆ.

ಪೋಸ್ಟ್ ಪೇಡ್ ಪ್ಲಾನ್ 499 ರೂಪಾಯಿಯಿಂದ ಶುರುವಾಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಉಚಿತ ಕರೆಯ ಲಾಭವನ್ನು ಪಡೆಯಬಹುದಾಗಿದೆ. ಈ ಪ್ಲಾನ್ ನಲ್ಲಿ ಕಂಪನಿ 20ಜಿಬಿ 4ಜಿ/3ಜಿ ಡೇಟಾ ನೀಡ್ತಿದೆ. ಸಾಮಾನ್ಯವಾಗಿ ಉಳಿದ ಕಂಪನಿಗಳು ಈ ಮೊತ್ತಕ್ಕೆ ಸದ್ಯ 10ರಿಂದ 15ಜಿಬಿ ಡೇಟಾ ನೀಡ್ತಿವೆ.

ಏರ್ಟೆಲ್ ಸೆಕ್ಯೂರ್ ಡಿವೈಸ್ ನೀಡುವುದಾಗಿಯೂ ಕಂಪನಿ ಹೇಳಿದೆ. ಇದ್ರ ಜೊತೆಗೆ ಇನ್ನೂ ಕೆಲ ಯೋಜನೆಗಳನ್ನು ನೀಡುವುದಾಗಿ ಕಂಪನಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಹೇಳಿದೆ. ಪೋಸ್ಟ್ ಪೇಡ್ ಗ್ರಾಹಕರಿಗೊಂದೇ ಅಲ್ಲ ಪ್ರೀ ಪೇಡ್ ಗ್ರಾಹಕರಿಗಾಗಿಯೂ ಕಂಪನಿ ಹೊಸ ಪ್ಲಾನ್ ಶುರು ಮಾಡಿದೆ. 448 ರೂಪಾಯಿ ಈ ಪ್ಲಾನ್ ನಲ್ಲಿ ಅನಿಯಮಿತ ಕರೆ ಹಾಗೂ 70 ಜಿಬಿ ಡೇಟಾ ಸಿಗಲಿದೆ. ಇದು ಇಡೀ ದೇಶದ ಗ್ರಾಹಕರಿಗೆ ಅನ್ವಯವಾಗಲಿದ್ದು, 2ಜಿ/3ಜಿ ಹಾಗೂ 4ಜಿ ಎಲ್ಲ ಗ್ರಾಹಕರಿಗೂ ಈ ಡೇಟಾ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...