alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ವೈಫೈ ಬಳಸಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ…!

ವಿಮಾನದಲ್ಲೂ ವೈಫೈ ಸೌಲಭ್ಯ ನೀಡುವಂತೆ ಟೆಲಿಕಾಂ ಪ್ರಾಧಿಕಾರ ಟ್ರಾಯ್ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸಿದ್ಧತೆ ಮಾಡಿಕೊಂಡಿವೆ. ವೈಫೈ ಸೌಲಭ್ಯಕ್ಕಾಗಿ ನಿಮ್ಮ ಒಟ್ಟಾರೆ ಟಿಕೆಟ್ ಮೊತ್ತದಲ್ಲಿ ಶೇ.20-30 ರಷ್ಟು ಹಣವನ್ನು ಹೆಚ್ಚುವರಿಯಾಗಿ ವಿಧಿಸುವ ಸಾಧ್ಯತೆ ಇದೆ.

ಡೊಮೆಸ್ಟಿಕ್ ಮತ್ತು ಇಂಟರ್ ನ್ಯಾಶನಲ್ ವಿಮಾನಗಳಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ವೈಫೈ ಸೌಲಭ್ಯನೀಡಲು ಸಂಸ್ಥೆಗಳು ಮುಂದಾಗಿವೆ. ಹಾಗಾಗಿ ಪ್ರಯಾಣಿಕರಿಗೆ ವಿಮಾನ ಪ್ರಯಾಣ ಮತ್ತಷ್ಟು ದುಬಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಸಮೀಪದ ಸ್ಥಳಗಳಿಗೆ ತೆರಳಲು ಡೊಮೆಸ್ಟಿಕ್ ವಿಮಾನ ಏರಿದ್ರೂ, ಪ್ರಯಾಣಿಕರು ಟಿಕೆಟ್ ಹಾಗೂ ವೈಫೈಗಾಗಿ ಹೆಚ್ಚು ಹಣ ತೆರಬೇಕಾಗುತ್ತದೆ. ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ವಿಮಾನಯಾನ ಸಂಸ್ಥೆಗಳು ಅಂತಿಮ ನಿರ್ಧಾರಕ್ಕೆ ಬರಲಿವೆ. ವೈಫೈ ಸೌಲಭ್ಯ ನೀಡಲು ವಿಮಾನದಲ್ಲಿ ಅಂಟೆನಾ ಅಳವಡಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...