alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್! ರೈಲುಗಳಲ್ಲಿ ಇನ್ಮುಂದೆ ಲಭ್ಯವಾಗಲಿದೆ ಏರ್ಲೈನ್ಸ್ ಮಾದರಿ ಊಟ

ಭಾರತೀಯ ರೈಲ್ವೇ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗ್ತಿದೆ. ಪ್ರಯಾಣಿಕರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಆರಂಭಿಸಿದೆ. ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಸರಳಗೊಳಿಸಲು , ಇ-ಟಿಕೆಟ್ ಬುಕ್ಕಿಂಗ್ ಕೂಡಾ ಮಾಡಿದೆ.

ಇದೀಗ ಆಯ್ದ ರೈಲುಗಳಲ್ಲಿ ಏರ್ ಲೈನ್ಸ್ ರೀತಿಯ ಊಟವನ್ನು ನೀಡಲು ಯೋಚಿಸುತ್ತಿದೆ. ಇದು ತನ್ನ ಅಡುಗೆ ಸೇವೆಗಳನ್ನು ಸುಧಾರಿಸುವ ಯೋಜನೆಯ ಒಂದು ಭಾಗವಾಗಿದೆ. ಅಲ್ಲದೆ ರೈಲ್ವೆ ಪ್ರ್ಯಾಂಟ್ರಿಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಬಳಲಾಗುವುದು ಎಂದು ತಿಳಿಸಲಾಗಿದೆ.

ಜುಲೈನಿಂದ ಗುಣಮಟ್ಟದ ಆಹಾರ ಸೇವೆಯನ್ನು ಪ್ರಾರಂಭಿಸಲಾಗುವುದು. ಆರಂಭದಲ್ಲಿ ರಾಜಧಾನಿ, ಶತಾಬ್ಧಿ, ದುರಂತೋ ರೈಲುಗಳಲ್ಲಿ ಪ್ರಯೋಗ ಮಾಡಲಾಗುವುದು. ನಂತರ ಇತರೆ ರೈಲುಗಳಿಗೆ ವಿಸ್ತರಿಸಲಾಗುವುದು ಅಂತಾ ರೈಲ್ವೇ ಬೋರ್ಡ್ ಅಧ್ಯಕ್ಷ ಅಶ್ವನಿ ಲೋಹಾನಿ ತಿಳಿಸಿದ್ಧಾರೆ. ತುಂಬ ಸರಳವಾದ ಆಹಾರಗಳಿದ್ದು, ಏರ್ ಲೈನ್ಸ್ ನಲ್ಲಿರುವಂತೆಯೇ ಎರಡು ಅಥವಾ ಮೂರು ಪದಾರ್ಥಗಳನ್ನು ಒಳಗೊಂಡಿರುವ ಕಾಂಬೋ ಭೋಜನವಾಗಿರುತ್ತದೆ ಎಂದು ಇದೇ ವೇಳೆ ಲೋಹಾನಿ ಸ್ಪಷ್ಟಪಡಿಸಿದ್ದಾರೆ.

ಈಗಿರುವ ರೈಲ್ವೆ ಸೇವೆಯಲ್ಲಿ ಕಡಿಮೆ ಗುಣಮಟ್ಟದ ಆಹಾರ ನೀಡಲಾಗ್ತಿದೆ ಎಂಬ ಸುಳಿವು ಸಿಕ್ಕಿದೆ. ಸಿಎಜಿ ವರದಿಯಲ್ಲೂ ಇದು ಬಹಿರಂಗವಾಗಿದೆ. ಹೀಗಾಗಿ ರೈಲುಗಳಲ್ಲಿ ಅಡುಗೆ ಸೇವೆಗಳನ್ನು ನಿರ್ವಹಿಸುವ ಐ ಆರ್ ಸಿ ಟಿ ಸಿ ರೈಲುಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರನ್ನು ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದ್ರು.

ಇದೇ ವೇಳೆ ಐ ಆರ್ ಸಿ ಟಿ ಸಿ ದೇಶದಾದ್ಯಂತ 68 ಅತ್ಯಾಧುನಿಕ ಅಡುಗೆ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಡಿಸೆಂಬರ್ 2019ರ ಹೊತ್ತಿಗೆ ಈ ಅಡುಗೆ ಮನೆಗಳು ಸಿದ್ಧವಾಗಲಿವೆ. ಇನ್ನು ಈ ಅಡುಗೆ ಮನೆಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ತಯಾರಿಸಲು ಬೇರೆ ಬೇರೆ ಸ್ಥಳಗಳನ್ನು ಮಾಡಲಾಗಿದೆ. ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ ಅಂತಾ ಲೋಹಾನಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...