alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ಏರ್ ಸೆಲ್ ಗ್ರಾಹಕರಾಗಿದ್ದರೆ ತಪ್ಪದೆ ಓದಿ ಈ ಸುದ್ದಿ

ಏರ್ ಸೆಲ್ ಕಂಪನಿಯ ಗ್ರಾಹಕರಿಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಭ ಸುದ್ದಿ ನೀಡಿದೆ. ಎಲ್ಲಾ ಪೋಸ್ಡ್ ಪೇಯ್ಡ್ ಗ್ರಾಹಕರಿಗೆ ಸೆಕ್ಯುರಿಟಿ ಡಿಪಾಸಿಟ್ ವಾಪಸ್ ನೀಡಲು ಹಾಗೂ ಪ್ರೀ ಪೇಯ್ಡ್ ಗ್ರಾಹಕರಿಗೆ ಉಳಿದಿರುವ ಬ್ಯಾಲೆನ್ಸ್  ಹಿಂತಿರುಗಿಸಬೇಕೆಂದು ಟ್ರಾಯ್ ಏರ್ ಸೆಲ್  ಕಂಪನಿಗೆ ನಿರ್ದೇಶನ ನೀಡಿದೆ.

ಕಳೆದ ಫೆಬ್ರುವರಿಯಲ್ಲಿ ಏರ್ ಸೆಲ್ ತಾನು ದಿವಾಳಿಯಾಗಿರುವ ಬಗ್ಗೆ ಹೇಳಿಕೊಂಡಿತ್ತು. ಆ ಬಳಿಕ ಅನೇಕ ಗ್ರಾಹಕರು ಬೇರೆ ಬೇರೆ ನಂಬರ್ ಗಳಿಗೆ ವರ್ಗಾಯಿಸಿಕೊಂಡಿದ್ದರು.

ಆದರೆ ಏರ್ ಸೆಲ್ ಕಂಪನಿ ಬ್ಯಾಲೆನ್ಸ್ ಹಣವನ್ನು ನೀಡದಿರುವ ಬಗ್ಗೆ ಟ್ರಾಯ್ ಗೆ ದೂರುಗಳು ಬಂದಿದ್ದವು. ಆದರೀಗ ಟ್ರಾಯ್ ನಿರ್ದೇಶನ ನೀಡಿರುವುದರಿಂದ ಗ್ರಾಹಕರಿಗೆ ತಮ್ಮ ಹಣ ಮರಳಿ ಬರುವ ಬಗ್ಗೆ ಭರವಸೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...