alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಸ್ಕ್ರೀನ್ ಅನ್ಲಾಕ್ ಮಾಡಿ ಹಣ ಗಳಿಸಿ

ಸ್ಮಾರ್ಟ್ಫೋನ್ ಲಾಕ್ ಸಿಸ್ಟಂ ಈಗ ಸಾಮಾನ್ಯವಾಗಿದೆ. ನಮ್ಮ ಮೊಬೈಲನ್ನು ಬೇರೆಯವರು ಬಳಸದಿರಲಿ ಎನ್ನುವ ಕಾರಣಕ್ಕೆ ಸ್ಮಾರ್ಟ್ಫೋನ್ ಬಳಕೆದಾರರು ಲಾಕ್ ಸಿಸ್ಟಂ ಬಳಸ್ತಾರೆ. ಆದ್ರೆ ಈ ಲಾಕ್ ಸಿಸ್ಟಂನಿಂದ ಹಣ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ.

ಮೊಬೈಲ್ ಅನ್ಲಾಕ್ ಮಾಡಿ ಪ್ರತಿ ವಾರ ನೀವು ಉಚಿತ ಟಾಪ್ ಅಪ್ ಗಾಗಿ ಹಣ ಸಂಗ್ರಹಿಸಬಹುದು. ಏರ್ಸೆಲ್ ನಿಮಗೆ ಈ ಅವಕಾಶ ನೀಡ್ತಿದೆ. ಏರ್ಸೆಲ್ ಕಂಪನಿ ಓಪನ್ 2 ಆರ್ನ್ ಅಪ್ಲಿಕೇಷನ್ ಶುರು ಮಾಡಿದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಿಮಗೆ ಲಭ್ಯವಿದೆ.

ಮೊದಲು ಓಪನ್ 2 ಆರ್ನ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನಂತ್ರ ಅದ್ರಲ್ಲಿ ಕೆಲವೊಂದು ಮಾಹಿತಿಗಳನ್ನು ತುಂಬಬೇಕಾಗುತ್ತದೆ. ಆ್ಯಪ್ ಡೌನ್ಲೋಡ್ ಆದ ನಂತ್ರ ಪ್ರತಿ ಬಾರಿ ನೀವು ಮೊಬೈಲ್ ಅನ್ಲಾಕ್ ಮಾಡಿದಾಗ ನಿಮಗೆ ಜಾಹೀರಾತೊಂದು ಕಾಣಿಸುತ್ತದೆ. ಈ ಜಾಹೀರಾತು ವೀಕ್ಷಣೆ ಮಾಡಿದ್ರೆ ನಿಮಗೆ ಅಂಕ ಸಿಗುತ್ತದೆ. 60 ಅಂಕ ನಿಮ್ಮದಾದ್ರೆ ನೀವು 10 ರೂಪಾಯಿ ಗಳಿಕೆ ಮಾಡಬಹುದು.

ಎರ್ಸೆಲ್ ಸಿಮ್ ಹೊಂದಿದವರಿಗೆ ಮಾತ್ರ ಇದ್ರ ಲಾಭ ಸಿಗಲಿದೆ. ಈ ಆ್ಯಪ್ ನಲ್ಲಿ ಜಾಹೀರಾತು ನೋಡಲು ನೀವು ಪ್ರತಿ ತಿಂಗಳು 150 ಎಂಬಿ ಖರ್ಚು ಮಾಡಬೇಕಾಗುತ್ತದೆ. ನೆನಪಿರಲಿ ಹೆಚ್ಚು ಅಂಕ ಗಳಿಸಿ ಹೆಚ್ಚು ಮೊತ್ತದ ಟಾಪ್ ಅಪ್ ಗಳಿಸುವ ಬರದಲ್ಲಿ ಡೇಟಾ ಖಾಲಿ ಮಾಡಿಕೊಂಡ್ರೆ ಎರ್ಸೆಲ್ ಹೊಣೆಯಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...