alex Certify
ಕನ್ನಡ ದುನಿಯಾ       Mobile App
       

Kannada Duniya

88 ರೂ.ಗೆ ಪ್ರತಿದಿನ 1 ಜಿಬಿ ಡೇಟಾ ನೀಡ್ತಿದೆ ಈ ಕಂಪನಿ

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಪ್ರವೇಶ ಮಾಡ್ತಿದ್ದಂತೆ ಟೆಲಿಕಾಂ ಕಂಪನಿಗಳ ಸ್ಪರ್ಧೆ ವೇಗ ಪಡೆದಿದೆ. ಟೆಲಿಕಾಂ ಕಂಪನಿಗಳ ಡೇಟಾ ಯುದ್ಧದಲ್ಲಿ ಗ್ರಾಹಕರು ಲಾಭ ಪಡೆಯುತ್ತಿದ್ದಾರೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಏರ್ಸೆಲ್ ಹೊಸ ಯೋಜನೆಯೊಂದನ್ನು ಶುರು ಮಾಡಿದೆ.

ಪ್ರೀಪೇಯ್ಡ್ ಗ್ರಾಹಕರಿಗಾಗಿ ಏರ್ಸೆಲ್ ಈ ಯೋಜನೆ ಶುರು ಮಾಡಿದೆ. ಒಂದು ವರ್ಷ ವ್ಯಾಲಿಡಿಟಿಯ ಯೋಜನೆ ಇದಾಗಿದೆ. ಈ ಪ್ಯಾಕ್ ಬೆಲೆ 104 ರೂಪಾಯಿ. ಈ ಯೋಜನೆಯಡಿ ಏರ್ಸೆಲ್ ಗ್ರಾಹಕರಿಗೆ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಲೋಕಲ್ ಹಾಗೂ ಎಸ್ ಟಿ ಡಿ ಕರೆ ನೀಡ್ತಿದೆ. ಹಾಗೆ ಕಂಪನಿ ಪ್ರೀಪೇಯ್ಡ್ ಬಳಕೆದಾರರಿಗೆ ಇನ್ನೂ ಎರಡು ಹೊಸ ಯೋಜನೆಯನ್ನು ಪರಿಚಯಿಸಿದೆ.

ಇದ್ರಲ್ಲಿ ಒಂದು ಪ್ಲಾನ್ 88 ರೂಪಾಯಿಯದ್ದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1ಜಿಬಿ ಡೇಟಾ, ಅನಿಯಮಿತ ಕರೆ ಸಿಗಲಿದೆ. ಇದ್ರ ವ್ಯಾಲಿಡಿಟಿ 7 ದಿನ. ಎರಡನೇ ಪ್ಲಾನ್ ಬೆಲೆ 199 ರೂಪಾಯಿಯಾಗಿದೆ. ಅನಿಯಮಿತ ವಾಯ್ಸ್ ಕಾಲ್ ಜೊತೆ 1 ಜಿಬಿ ಡೇಟಾ ಸಿಗಲಿದ್ದು, ಇದ್ರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...