alex Certify
ಕನ್ನಡ ದುನಿಯಾ       Mobile App
       

Kannada Duniya

99 ರೂ.ಗೆ 7 ನಗರ ಸುತ್ತುವ ಅವಕಾಶ

ಏರ್ ಏಷ್ಯಾ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಭಾರತದ ಏಳು ಪ್ರಮುಖ ನಗರಗಳಿಗೆ ಕಡಿಮೆ ಬೆಲೆಯಲ್ಲಿ ಪ್ರಯಾಣ ಬೆಳೆಸುವ ಆಫರ್ ನೀಡುತ್ತಿದೆ. ಈ ಆಫರ್ ಪ್ರಕಾರ ಗ್ರಾಹಕರು ಮೂಲ ಬೆಲೆ 99 ರೂಪಾಯಿಗೆ ಭಾರತದ ನಗರಗಳನ್ನು ಸುತ್ತಬಹುದಾಗಿದೆ.

ಬೆಂಗಳೂರು, ಹೈದ್ರಾಬಾದ್, ಕೊಚ್ಚಿ, ಕೊಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಏರ್ ಇಂಡಿಯಾ ಈ ಆಫರ್ ನೀಡ್ತಿದೆ. ಮೂಲ ಬೆಲೆ 99 ರೂಪಾಯಿಗೆ ಪ್ರಯಾಣಿಕರು ಈ ನಗರಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. ಇದ್ರ ಜೊತೆಗೆ 1499 ರೂಪಾಯಿ ಮೂಲ ಬೆಲೆಗೆ ವಿದೇಶಕ್ಕೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಕಂಪನಿ ನೀಡುತ್ತಿದೆ.

ಏಷ್ಯಾ-ಪೆಸಿಫಿಕ್ ನ 10 ದೇಶಗಳಲ್ಲಿ ಯಾವುದಕ್ಕೆ ಬೇಕಾದ್ರೂ ಪ್ರಯಾಣ ಬೆಳೆಸಬಹುದಾಗಿದೆ. ಆಕ್ಲೆಂಡ್, ಬಾಲಿ, ಬ್ಯಾಂಕಾಕ್, ಕೌಲಾಲಂಪುರ್, ಮೆಲ್ಬರ್ನ್, ಸಿಂಗಾಪುರ್ ಮತ್ತು ಸಿಡ್ನಿಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. ಈ ಆಫರ್ ಇಂದಿನಿಂದ ಶುರುವಾಗಿದೆ. ಜನವರಿ 21ರವರೆಗೆ ಗ್ರಾಹಕರು ಈ ಬೆಲೆಗೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಜನವರಿ 15ರಿಂದ ಜುಲೈ 31ರವರೆಗೆ ಪ್ರಯಾಣಿಕರು ಪ್ರಯಾಣ ಬೆಳೆಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...