alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ

ವಿಮಾನ ಪ್ರಯಾಣಿಕರ ಬಹುದಿನದ ಬೇಡಿಕೆಯೊಂದನ್ನು ಈಡೇರಿಸಲು ‌ಕೇಂದ್ರ ಸರಕಾರ ನಿರ್ಧರಿಸಿದ್ದು, ಕೆಲವೇ ದಿನದಲ್ಲಿ ಈ ಬೇಡಿಕೆಗೆ ಸಮ್ಮತಿ‌ ನೀಡುವ ಸಾಧ್ಯತೆ ಇದೆ.

ಇಷ್ಟು ದಿನ‌ ಯಾವುದೇ ರೀತಿಯ ದ್ರವ ಪದಾರ್ಥವನ್ನು ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ಆದರೀಗ ದೇಶಿಯ ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲು ‌ನಿರ್ಧರಿಸಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಕೆಲ ದಿನದಲ್ಲಿಯೇ, ನೀರು, ಶ್ಯಾಂಪೂ ಸೇರಿದಂತೆ ಕೆಲ ದ್ರವ ರೂಪದ ಪದಾರ್ಥವನ್ನು ಕ್ಯಾಬಿನ್ ಬ್ಯಾಗೇಜ್ ನಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಈ‌ ಯೋಜನೆ ಇನ್ನು ಪ್ರಾಥಮಿಕ ಹಂತದಲ್ಲಿದ್ದು, ದ್ರವ ಸ್ಪೋಟಕಗಳನ್ನು ಕಂಡುಹಿಡಿಯುವ ತಂತ್ರಜ್ಞಾನವಿರುವ ಕಂಪನಿಗಳು ‌ಮುಂದೆ ಬಂದರೆ ಇದನ್ನು ಅನುಷ್ಠಾನಗೊಳಿಸಬಹುದಾಗಿದೆ. ಆರಂಭದ ದಿನದಲ್ಲಿ ಇದನ್ನು ಪ್ರಾಯೋಗಿಕವಾಗಿ ಮೆಟ್ರೋ‌ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಈ‌ ರೀತಿಯ ತಪಾಸಣಾ ತಂತ್ರಜ್ಞಾನವನ್ನು ಅಮೆರಿಕಾ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಪ್ರಯೋಗ ನಡೆಸಲಾಗಿದೆ. ಆದರೆ ಸ್ಕ್ಯಾನಿಂಗ್ ಯಂತ್ರದಲ್ಲಿ ಯಾವ ರೀತಿಯ ಪದಾರ್ಥವೆಂದು ನೋಡಿ‌ ವಿಮಾನದೊಳಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...