alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ನಲ್ಲಿ LPG ಬೆಲೆ ಪರಿಷ್ಕರಿಸದ ಕಂಪನಿಗಳು

ನವದೆಹಲಿ: ಕಳೆದ 17 ತಿಂಗಳ ಅವಧಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ 76.5 ರೂ. ಏರಿಕೆಯಾಗಿದೆ. ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡುತ್ತಿದ್ದ ತೈಲ ಕಂಪನಿಗಳು ಡಿಸೆಂಬರ್ ನಲ್ಲಿ ಬೆಲೆ ಪರಿಷ್ಕರಣೆ ಮಾಡಿಲ್ಲ.

ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಪ್ರಮುಖ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ., ಇಂಡಿಯನ್ ಆಯಿಲ್ ಕಂಪನಿಗಳು ಪ್ರತಿ ತಿಂಗಳು ಎಲ್.ಪಿ.ಜಿ. ಬೆಲೆಯನ್ನು ಏರಿಕೆ ಮಾಡುವ ಪದ್ಧತಿಯನ್ನು ಡಿಸೆಂಬರ್ ನಲ್ಲಿ ಕೈ ಬಿಟ್ಟಿವೆ ಎನ್ನಲಾಗಿದೆ.

2018 ರ ಮಾರ್ಚ್ ವೇಳೆಗೆ ಸಬ್ಸಿಡಿಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ. ಇದಕ್ಕಾಗಿ ಪ್ರತಿ ತಿಂಗಳು ದರ ಏರಿಕೆ ಮಾಡಲಾಗ್ತಿದೆ. 17 ತಿಂಗಳಲ್ಲಿ 19 ಕಂತುಗಳಲ್ಲಿ 76.5 ರೂ. ಏರಿಕೆ ಮಾಡಲಾಗಿದೆ.

14.2 ಕೆ.ಜಿ. ಎಲ್.ಪಿ.ಜಿ. ಸಿಲಿಂಡರ್ ಗೆ 251.31 ರೂ. ಸಬ್ಸಿಡಿ ನೀಡಲಾಗ್ತಿದೆ. ಡಿಸೆಂಬರ್ ನಲ್ಲಿ ಕಂಪನಿಗಳು ದರ ಏರಿಕೆ ಮಾಡದಿರಲು ಕೇಂದ್ರ ಸರ್ಕಾರದ ಸೂಚನೆ ಗುಜರಾತ್ ಚುನಾವಣೆ ಕಾರಣವಿರಬಹುದೆಂದು ಹೇಳಲಾಗಿದೆ. ಆದರೆ, ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...