alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಪ್ರಾಧಿಕಾರದಿಂದ ಹೊರಬಿದ್ದಿದೆ ಈ ಮಹತ್ವದ ಸೂಚನೆ

ಗೂಗಲ್, ಸ್ಮಾರ್ಟ್ಫೋನ್ ಮತ್ತು ಸಿಮ್ ಕಾರ್ಡ್ ಗಳಲ್ಲಿ 1800-300-1947 ಸಂಖ್ಯೆ ಆಧಾರ್ ಕಾರ್ಡ್ ಸಹಾಯವಾಣಿ ನಂಬರ್ ಆಗಿ ದಾಖಲಾಗಿಬಿಟ್ಟಿತ್ತು. ಆದ್ರೆ ಇದು ತನ್ನ ಅಧಿಕೃತ ಸಹಾಯವಾಣಿಯ ನಂಬರ್ ಅಲ್ಲ ಅಂತ ಆಧಾರ್ ಪ್ರಾಧಿಕಾರ ಆಗಸ್ಟ್ 4ರಂದು ಸ್ಪಷ್ಟನೆ ನೀಡಿತ್ತು. ಆನಂತರ ಜನರಲ್ಲಿ ಡೀಫಾಲ್ಟ್ ರೂಪದಲ್ಲಿ ಮೊಬೈಲ್ ನಲ್ಲಿ ದಾಖಲಾಗಿರುವ ಈ ತಪ್ಪಾದ ಸಹಾಯವಾಣಿ ಮೊಬೈಲ್ನಲ್ಲಿರುವ ಡೇಟಾವನ್ನು ಕಳವು ಮಾಡಿಬಿಡುತ್ತೆ ಅನ್ನೋ ಆತಂಕ ಮನೆ ಮಾಡಿತ್ತು.

ಜನರ ನಡುವೆ ಹಬ್ಬಿದ್ದ  ಡೀಫಾಲ್ಟ್ ನಂಬರ್ ನಿಂದಾಗಿ ಫೋನ್ ನಲ್ಲಿರುವ ಡೇಟಾ ಕಳುವಾಗುತ್ತೆ ಅನ್ನೋ ಗಾಳಿಸುದ್ದಿ ಆಧಾರ್ ಪ್ರಾಧಿಕಾರದವರ ಕಿವಿ ಮೇಲೂ ಬಿದ್ದಿದೆ. ಈ ಬಗ್ಗೆ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ ಸ್ಪಷ್ಟನೆಯನ್ನು ನೀಡಿದೆ. ಆಧಾರ್ ನ ಆ ಡೀಫಾಲ್ಟ್ ನಂಬರ್ ನ್ನ ಕೂಡಲೇ ಫೋನ್ಬುಕ್ನಿಂದ ಡಿಲೀಟ್ ಮಾಡುವಂತೆ ಆಧಾರ್ ಪ್ರಾಧಿಕಾರ ಸೂಚಿಸಿದೆ.

ಅದರ ಜೊತೆಗೆ ಆ ನಂಬರ್ನಿಂದ ಫೋನ್ ನಲ್ಲಿರುವ ಮಾಹಿತಿ ಕಳುವಾಗೋದಿಲ್ಲ ಅಂತ ಆಧಾರ್ ಪ್ರಾಧಿಕಾರ ಸ್ಪಷ್ಟನೆಯನ್ನ ನೀಡಿದೆ. ತಪ್ಪು ನಂಬರ್ನಿಂದ ಫೋನ್ನಲ್ಲಿರುವ ಮಾಹಿತಿ ಕಳುವಾಗುತ್ತದೆ ಅನ್ನೋ ವಿಚಾರ ಸುಳ್ಳು. ಆ ನಂಬರ್ನಿಂದ ಯಾವುದೇ ರೀತಿಯಲ್ಲೂ ದುರುಪಯೋಗ ಸಾಧ್ಯವಿಲ್ಲ ಅಂತ ಆಧಾರ್ ಪ್ರಾಧಿಕಾರ ತಿಳಿಸಿದೆ. ಕಳೆದ ವಾರವಷ್ಟೆ ಆಧಾರ್ ನಂಬರ್ ನ್ನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ರೆ ಅದರ ಜನರ ವೈಯಕ್ತಿಕ ಮಾಹಿತಿಯನ್ನ ಕಳವು ಮಾಡಬಹುದು ಅನ್ನೋ ವಿಚಾರ ಸಾಕ್ಷ್ಯ ಸಮೇತ ಬೆಳಕಿಗೆ ಬಂದಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...