alex Certify
ಕನ್ನಡ ದುನಿಯಾ       Mobile App
       

Kannada Duniya

PAN ಆಯ್ತು, ಮೊಬೈಲ್ ಆಯ್ತು ಈಗ DL ಸರದಿ

ಕೇಂದ್ರ ಸರ್ಕಾರ ಆಧಾರ್ ಕಾರ್ಡನ್ನು ಎಲ್ಲ ಅಗತ್ಯ ಸೇವೆಗಳಿಗೆ ಕಡ್ಡಾಯ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಜೋಡಣೆ ಮಾಡುವುದನ್ನು ಅನಿವಾರ್ಯಗೊಳಿಸಿರುವ ಸರ್ಕಾರ ಈಗ ಡ್ರೈವಿಂಗ್ ಲೈಸೆನ್ಸ್ ಮೇಲೆ ಕಣ್ಣಿಟ್ಟಿದೆ.

ಡ್ರೈವಿಂಗ್ ಲೆಸೆನ್ಸ್ ಜೊತೆ ಆಧಾರ್ ಲಿಂಕ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ ವಿಚಾರ ಮಾಡ್ತಿದೆ. ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್, ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಲಿಂಕ್ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಅಕ್ರಮ ತಡೆಗೆ ಪಾನ್ ಜೊತೆ ಆಧಾರ್ ಲಿಂಕ್ ಮಾಡಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಲಿಂಕ್ ಮಾಡಿದ್ರೆ ನಕಲಿ ಪರವಾನಿಗೆ ತಡೆಯಲು ಸಾಧ್ಯವೆಂದು ರವಿ ಶಂಕರ್ ಹೇಳಿದ್ದಾರೆ. ಆಧಾರ್ ಡಿಜಿಟಲ್ ಗುರುತಾಗಿದ್ದು, ಡಿಜಿಟಲ್ ಆಡಳಿತಕ್ಕೆ ಇದು ಉತ್ತಮವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೇ ತಿಂಗಳಿನಲ್ಲಿಯೇ ಈ ಬಗ್ಗೆ ರವಿಶಂಕರ್ ಸುಳಿವು ನೀಡಿದ್ದರು. ಈಗ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಧಾರ್ ಜೊತೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡುವುದನ್ನು ಅನಿವಾರ್ಯಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...