alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಕ್ಕೇರಿದ ಪೆಟ್ರೋಲ್ ಬೆಲೆ: ವಾಹನ ಸವಾರರ ಜೇಬು ಸುಡ್ತಿದೆ ಡಿಸೇಲ್

ಕರ್ನಾಟಕ ಚುನಾವಣೆ ನಂತ್ರ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಸತತ ಮೂರನೇ ದಿನ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. 19 ದಿನಗಳ ನಂತ್ರ ಸತತ ಮೂರು ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.

ಬುಧವಾರ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 75.10 ರೂಪಾಯಿಗೆ ಬಂದು ನಿಂತಿದೆ. ಡಿಸೇಲ್ ಬೆಲೆ 66 ರೂಪಾಯಿ ಗಡಿ ದಾಟಿದೆ. ವಾಹನ ಸವಾರರು ಒಂದು ಲೀಟರ್ ಡಿಸೇಲ್ ಗೆ 66.57 ರೂಪಾಯಿ ನೀಡಬೇಕಾಗಿದೆ. ಇಂಡಿಯನ್ ಆಯಿಲ್ ಕಂಪನಿ ಪ್ರಕಾರ ಬುಧವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಏರಿಕೆಯಾಗಿದೆಯಂತೆ. ಡಿಸೇಲ್ ಬೆಲೆ 21 ಪೈಸೆ ಏರಿಕೆಯಾಗಿದೆಯಂತೆ

ಉಳಿದ ಮೆಟ್ರೋ ನಗರಗಳಲ್ಲಿ ಕೂಡ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ವಾಹನ ಸವಾರರ ಜೇಬು ಸುಡ್ತಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.94ಕ್ಕೆ ಬಂದು ನಿಂತಿದೆ. ಕೊಲ್ಕತ್ತಾದಲ್ಲಿ 77.79 ರೂಪಾಯಿಯಾದ್ರೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 79 ರೂಪಾಯಿ 90 ಪೈಸೆಯಾಗಿದೆ.

2014ರ ನಂತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿರುವುದೇ ಇದಕ್ಕೆ ಕಾರಣ. ಕರ್ನಾಟಕ ಚುನಾವಣೆಗೂ ಮುನ್ನ 19 ದಿನಗಳ ಕಾಲ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿರಲಿಲ್ಲ. ಆದ್ರೆ ಮತದಾನ ಮುಗಿಯುತ್ತಿದ್ದಂತೆ ತೈಲ ಬೆಲೆ ಏರಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...