alex Certify
ಕನ್ನಡ ದುನಿಯಾ       Mobile App
       

Kannada Duniya

‘ಓಲಾ’ದ ಟ್ಯಾಕ್ಸಿ ಫಾರ್ ಶ್ಯೂರ್ ಸೇವೆ ಸ್ಥಗಿತ

OLAಓಲಾ ಕಂಪನಿ ವರ್ಷದ ಹಿಂದಷ್ಟೆ ಟ್ಯಾಕ್ಸಿ ಫಾರ್ ಶ್ಯೂರ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 1240 ಕೋಟಿ ರೂಪಾಯಿ ವೆಚ್ಚ ಮಾಡಿ ಓಲಾ ಮತ್ತು ಟ್ಯಾಕ್ಸಿ ಫಾರ್ ಶ್ಯೂರ್ ಎರಡೂ ಸೇವೆಗಳನ್ನು ವಿಲೀನಗೊಳಿಸಿತ್ತು.

ಬಳಿಕ ಓಲಾ ಆಪ್ ಮೂಲಕ ಗ್ರಾಹಕರು ಟ್ಯಾಕ್ಸಿ ಫಾರ್ ಶ್ಯೂರ್ ಅನ್ನು ಕೂಡ ಬುಕ್ ಮಾಡಬಹುದಿತ್ತು. ಆದ್ರೀಗ ಓಲಾ, ಟ್ಯಾಕ್ಸಿ ಫಾರ್ ಶ್ಯೂರ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಅಷ್ಟೇ ಅಲ್ಲ ನೂರಾರು ನೌಕರರನ್ನು ಕೆಲಸದಿಂದ ಕಿತ್ತು ಹಾಕುತ್ತಿದೆ.

ಸುಮಾರು 700- 1000 ನೌಕರರನ್ನು ಓಲಾ ವಜಾ ಮಾಡಲಿದೆ ಎನ್ನಲಾಗ್ತಿದೆ. ಭಾರತದಲ್ಲಿ ಉಬರ್ ಸಂಸ್ಥೆ ಜೊತೆ ಪೈಪೋಟಿಗಿಳಿದಿರುವ ಓಲಾ, ಲಾಭದ ಲೆಕ್ಕಾಚಾರದಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಕೆಲಸದಿಂದ ತೆಗೆದುಹಾಕಲ್ಪಟ್ಟ ನೌಕರರಿಗೆ ತಮ್ಮ ವೃತ್ತಿ ಬದುಕು ಮುಂದುವರಿಸಲು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ನೆರವಾಗುವುದಾಗಿಯೂ ಓಲಾ ಸಂಸ್ಥೆ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...