alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ‘ಬಿಗ್ ಶಾಕ್’

ಕರ್ನಾಟಕದ ಜನತೆಯ ಆತಂಕ ಕೊನೆಗೂ ನಿಜವಾಗಿದೆ. ಈ ಬಾರಿಯ ಏರೋ ಶೋ ರಾಜ್ಯದ ಕೈ ತಪ್ಪಬಹುದೆಂಬ ಮಾತು ಈಗ ಸತ್ಯವಾಗಿದೆ.

ಇದುವರೆಗೂ ಬೆಂಗಳೂರಿನ ಯಲಹಂಕ ಏರ್ ಬೇಸ್ ನಲ್ಲಿ ನಡೆದುಕೊಂಡು ಬರುತ್ತಿದ್ದ ಈ ಪ್ರತಿಷ್ಠಿತ ಏರ್ ಶೋ, ಈ ಬಾರಿ ಉತ್ತರ ಪ್ರದೇಶದ ಲಕ್ನೋ ಸಮೀಪವಿರುವ ಬಕ್ಷಿ ಕಾ ತಾಲಾಬ್ ಏರ್ ಸ್ಟೇಷನ್ ಗೆ ಸ್ಥಳಾಂತರಗೊಂಡಿದೆ.

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದು, 2019 ರ ಫೆಬ್ರವರಿಯಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲು ನಿಗದಿಯಾಗಿದ್ದ ಏರೋ ಶೋ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ಅಂದರೆ ಈ ವರ್ಷದ ಅಕ್ಟೋಬರ್ 27 ರಿಂದ ನವೆಂಬರ್ 4 ರ ವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏರೋ ಶೋ ಸ್ಥಳಾಂತರಿಸದಂತೆ ಮನವಿ ಮಾಡಿದ್ದರು. ಇದಕ್ಕೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದ ರಕ್ಷಣಾ ಸಚಿವರು ಕಡೆಗೂ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲು ಸೂಚನೆ ನೀಡುವ ಮೂಲಕ ಕನ್ನಡಿಗರಿಗೆ ‘ಶಾಕ್’ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...