alex Certify
ಕನ್ನಡ ದುನಿಯಾ       Mobile App
       

Kannada Duniya

ನಾಣ್ಯ ಚಲಾವಣೆ ಕುರಿತಂತೆ ಆರ್ ಬಿ ಐ ನಿಂದ ಮಹತ್ವದ ಸೂಚನೆ

10 ರೂ. ನಾಣ್ಯ ಚಲಾವಣೆಯಿಲ್ಲಲ್ಲ ಎಂಬ ಗಾಳಿ ಸುದ್ದಿ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ ಗೊಂದಲ ಹಾಗೆಯೇ ಮುಂದುವರಿದಿದೆ. ಈಗಲೂ ಹಲವರು 10 ರೂ. ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಕೆಲ ಬ್ಯಾಂಕ್ ಗಳೂ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕುವ ಮೂಲಕ ಸಾರ್ವಜನಿರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದ್ದವು.

ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಮಹತ್ವದ ಆದೇಶ ಹೊರಡಿಸಿದ್ದು, ಕೇವಲ 10 ರೂ. ನಾಣ್ಯ ಮಾತ್ರವಲ್ಲ. 1, 2 ಹಾಗೂ 5 ರೂ. ನಾಣ್ಯಗಳನ್ನೂ ಸಹ ಯಾವುದೇ ಹಿಂಜರಿಕೆಯಿಲ್ಲದೆ ಪಡೆಯಿರಿ. ಯಾವುದೇ ನಾಣ್ಯಗಳನ್ನು ಚಲಾವಣೆಯಿಂದ ಹಿಂದೆ ಪಡೆದಿಲ್ಲವೆಂದು ಸ್ಪಷ್ಟಪಡಿಸಿದೆ.

2009 ರ ಮಾರ್ಚ್ ನಿಂದ 2017 ರ ಜೂನ್ ಅವಧಿಯಲ್ಲಿ ಸುಮಾರು 14 ಬಗೆಯ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಲಾಗಿದೆ. ನಾಣ್ಯಗಳ ಬಾಳಿಕೆ ಜಾಸ್ತಿಯಿರುವ ಕಾರಣ ಸಹಜವಾಗಿಯೇ ಹಳೆ ನಾಣ್ಯಗಳು ಇಂದಿಗೂ ಚಲಾವಣೆಗೆ ಬರುತ್ತವೆ. ಇದರಿಂದಾಗಿ ಗೊಂದಲ ಉಂಟಾಗಿದ್ದು, 10 ರೂ. ಮುಖಬೆಲೆಯ ಎಲ್ಲ ನಾಣ್ಯಗಳೂ ಜೊತೆಗೆ 1, 2 ಹಾಗೂ 5 ರೂ. ನಾಣ್ಯಗಳು ಚಲಾವಣೆಯಲ್ಲಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...