alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಯ್, ಸಮೋಸಾಕ್ಕೆ 1 ಕೋಟಿ ರೂ. ವೆಚ್ಚ

334455ದೆಹಲಿಯ ಆಮ್ ಆದ್ಮಿ ಸರ್ಕಾರ, ಕಳೆದ 18 ತಿಂಗಳ ಅವಧಿಯಲ್ಲಿ ಅತಿಥಿಗಳಿಗೆ ನೀಡಲಾದ ಚಾಯ್, ಸಮೋಸಾಕ್ಕೆ ಬರೋಬ್ಬರಿ 1 ಕೋಟಿ ರೂ. ವೆಚ್ಚ ಮಾಡಿರುವ ಸಂಗತಿ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.

ವಿವೇಕ್ ಗಾರ್ಗ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿ ನೀಡಲಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ 6 ಮಂದಿ ಸಚಿವರು ಇಷ್ಟು ವೆಚ್ಚ ಮಾಡಿರುವುದಾಗಿ ಇದರಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 47.29 ಲಕ್ಷ ರೂ. ವೆಚ್ಚದೊಂದಿಗೆ ಮೊದಲ ಸ್ಥಾನದಲ್ಲಿದ್ದು, ವಿಧಾನಸಭೆಯಲ್ಲಿನ ಕಛೇರಿಯಲ್ಲಿ ಅತಿಥಿಗಳ ಆತಿಥ್ಯಕ್ಕೆ 22,42,320 ವೆಚ್ಚ ಮಾಡಿದ್ದರೆ, ಗೃಹ ಕಛೇರಿಯಲ್ಲಿ 24,86,921 ರೂ. ಗಳನ್ನು ವ್ಯಯಿಸಲಾಗಿದೆ. ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 11,28,429 ಲಕ್ಷ ರೂ. ವೆಚ್ಚ ಮಾಡಿದ್ದು, ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ 11 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಸಂದೀಪ್ ಕುಮಾರ್ 9 ಲಕ್ಷ ರೂ., ಆರೋಗ್ಯ ಸಚಿವ ಸತ್ಯೇಂದ್ರ ಜೈನ್ 9.1 ಲಕ್ಷ ರೂ., ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ 6,30,090 ಲಕ್ಷ ರೂ. ಹಾಗೂ ಆಹಾರ ಸಚಿವ ಇಮ್ರಾನ್ ಹುಸೇನ್ 5.8 ಲಕ್ಷ ರೂ. ಗಳನ್ನು ವ್ಯಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...