alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆರಡು ಮಹತ್ವದ ಯೋಜನೆಗೆ ಆಧಾರ್ ಕಡ್ಡಾಯ

kerosene_main_1496639886_749x421

ಸೀಮೆಎಣ್ಣೆ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಸೀಮೆಎಣ್ಣೆ ಖರೀದಿಯಲ್ಲಿ ಸಬ್ಸಿಡಿ ಪಡೆಯುತ್ತಿರುವವರು ಹಾಗೂ ಅಟಲ್ ಪಿಂಚಣಿ ಯೋಜನೆ ಲಾಭ ಪಡೆಯುತ್ತಿರುವವರಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಸಂಖ್ಯೆಯನ್ನು ಇದ್ರ ಜೊತೆ ಸೇರಿಸಿದಲ್ಲಿ ಮಾತ್ರ ಇನ್ಮುಂದೆ ಸಬ್ಸಿಡಿ ಹಾಗೂ ಪಿಂಚಣಿ ಸಿಗಲಿದೆ.

ಆಧಾರ್ ಕಾರ್ಡ್ ಇಲ್ಲದವರು ಆದಷ್ಟು ಬೇಗ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಗೆ ಅರ್ಜಿ ಸಲ್ಲಿಸಬೇಕಾಗಿದೆ. ಸೀಮೆಎಣ್ಣೆ ಮೇಲೆ ಸಬ್ಸಿಡಿ ಪಡೆಯುತ್ತಿರುವವರು ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆಯನ್ನು ನೀಡಬೇಕು. ಅಟಲ್ ಪಿಂಚಣಿ ಯೋಜನೆ ಜೊತೆ ಆಧಾರ್ ಸಂಖ್ಯೆ ಸೇರ್ಪಡೆಗೆ ಜೂನ್ 15 ಕೊನೆಯ ದಿನ. ಆಧಾರ್ ಕಾರ್ಡ್ ಜಾರಿಯಾಗುವವರೆಗೆ ರೇಷನ್ ಕಾರ್ಡ್, ಚಾಲನಾ ಪರವಾನಿಗೆ, ಮತದಾನದ ಚೀಟಿ, ಫೋಟೋ ಇರುವ ಕಿಸಾನ್ ಪಾಸ್ ಬುಕ್, ಉದ್ಯೋಗ ಖಾತ್ರಿ ಯೋಜನೆ ಅಡಿ ಜಾರಿಯಾಗಿರುವ ಕಾರ್ಡ್ ಮತ್ತು ತಹಶೀಲ್ದಾರ್ ನೀಡಿರುವ ಪ್ರಮಾಣ ಪತ್ರದಲ್ಲಿ ಒಂದನ್ನು ಗುರುತಿನ ಚೀಟಿಯಾಗಿ ಬಳಸಬಹುದಾಗಿದೆ.

ಇದ್ರ ಜೊತೆಗೆ ಬ್ಯಾಂಕ್ ಖಾತೆ ಅಥವಾ ಆಧಾರ್ ಸಂಖ್ಯೆಯನ್ನು ರೇಷನ್ ಕಾರ್ಡ್ ಜೊತೆ ಸೇರ್ಪಡೆ ಮಾಡಲಾಗಿದೆ. ನಗದು ವರ್ಗಾವಣೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫಲಾನುಭವಿಗಳ ಹಣ ನೇರವಾಗಿ ಬ್ಯಾಂಕ್ ಖಾತೆ ಸೇರಲಿದೆ. ಇದ್ರಿಂದ ಯೋಜನೆಯ ದುರುಪಯೋಗ ತಪ್ಪಿ ಸೂಕ್ತ ವ್ಯಕ್ತಿಗಳಿಗೆ ಮಾತ್ರ ಲಾಭ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...