alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆನ್ಲೈನ್ ಕಂಪನಿ ಸೇವೆ ಪಡೆಯಲು ಆಧಾರ್ ಕಡ್ಡಾಯ

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ರೀಗ ಕೆಲವೊಂದು ಆನ್ಲೈನ್ ಕಂಪನಿಗಳ ಸೇವೆ ಪಡೆಯಲೂ ಆಧಾರ್ ಅನಿವಾರ್ಯವಾಗ್ತಿದೆ. ಇ-ಕಾಮರ್ಸ್ ಕಂಪನಿ ಅಮೆಜಾನ್ ಹಾಗೂ ಕಾರನ್ನು ಬಾಡಿಗೆಗೆ ನೀಡುವ ಜೂಮ್ ಕಾರ್ ಆಧಾರ್ ಕಾರ್ಡ್ ಕೇಳ್ತಿದೆ. ಗ್ರಾಹಕರಿಗೆ ಗುರುತಿನ ಕಾರ್ಡ್ ರೂಪದಲ್ಲಿ ಆಧಾರ್ ಕಾರ್ಡ್ ನೀಡುವಂತೆ ಒತ್ತಾಯಿಸುತ್ತಿದೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಅಮೆಜಾನ್ ವಕ್ತಾರರು, ಕಂಪನಿ ಗ್ರಾಹಕರಿಂದ ಗುರುತಿನ ಪತ್ರ ಪಡೆಯುತ್ತದೆ. ಆಧಾರ್ ಅತ್ಯುತ್ತಮ ಗುರುತಿನ ಪತ್ರವಾಗಿದೆ. ಹಾಗಾಗಿ ಆಧಾರ್ ಗೆ ಕಂಪನಿ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದಿದ್ದಾರೆ. ಆದ್ರೆ ಅಮೆಜಾನ್ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿಲ್ಲ. ಗ್ರಾಹಕರು ಬೇರೆ ಗುರುತಿನ ಪತ್ರ ತೋರಿಸಿಯೂ ತಮ್ಮ ವ್ಯವಹಾರ ನಡೆಸಬಹುದಾಗಿದೆ.

ಆದ್ರೆ ಕಾರು ಬಾಡಿಗೆಗೆ ನೀಡುವ ಫ್ಲಾಟ್ಫಾರ್ಮ್ ಜೂಮ್ ಕಾರ್ ಆಧಾರ್ ಅನಿವಾರ್ಯ ಮಾಡಿದೆ. ಆಧಾರ್ ಕಾರ್ಡ್ ನೀಡದೆ ಯಾವುದೇ ಬುಕ್ಕಿಂಗ್ ಸ್ವೀಕಾರ ಮಾಡುವುದಿಲ್ಲವೆಂದು ಜೂಮ್ ಕಾರ್ ಸ್ಪಷ್ಟನೆ ನೀಡಿದೆ. ವಿಜಯವಾಡ, ದೆಹಲಿ, ಎನ್ ಸಿ ಆರ್ ನಲ್ಲಿ ಕಾರು ಬಾಡಿಗೆಗೆ ಪಡೆಯುವವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು. ಒಂದು ತಿಂಗಳೊಳಗೆ ಇಡೀ ದೇಶದಾದ್ಯಂತ ಇದನ್ನು ಕಡ್ಡಾಯ ಮಾಡುವುದಾಗಿ ಜೂಮ್ ಕಾರ್ ಹೇಳಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...