alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಹೊಂದಿದ ಗ್ರಾಮೀಣ ಜನತೆಗೊಂದು ‘ಗುಡ್ ನ್ಯೂಸ್’

ಆಧಾರ್ ಕಾರ್ಡ್ ಹೊಂದಿದವರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಗ್ರಾಮೀಣ ಪ್ರದೇಶದ ಜನತೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿಯೇ ತಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬಹುದಾಗಿದೆ.

ಇಂದು ಬಹುತೇಕ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಇದರಲ್ಲಿ ಏನಾದರೂ ಅಪ್ ಡೇಟ್ ಮಾಡಿಸಬೇಕಾದ ಸಂದರ್ಭ ಬಂದ ವೇಳೆ ಗ್ರಾಮೀಣ ಪ್ರದೇಶದ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹೋಬಳಿ, ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ತೆರಳಿ ದಿನಗಟ್ಟಲೆ ಇದಕ್ಕೆ ವ್ಯಯಿಸಬೇಕಾದ ಪರಿಸ್ಥಿತಿಯಿತ್ತು.

ಇದನ್ನು ಮನಗಂಡು ಸರ್ಕಾರ, ಈಗ ರಾಜ್ಯದ 6024 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಅಪ್ ಡೇಟ್ ಮಾಡುವ ಅವಕಾಶ ಕಲ್ಪಿಸಿದೆ. ಆಗಸ್ಟ್ ನಿಂದ ಈ ಸೌಲಭ್ಯ ಲಭ್ಯವಾಗಲಿದ್ದು, ಆಧಾರ್ ಕಾರ್ಡ್ ಹೊಂದಿದವರು 25 ರೂ. ಶುಲ್ಕ ಪಾವತಿಸಿ ತಮ್ಮ ಹೆಸರು, ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಜನ್ಮ ದಿನಾಂಕ ಮೊದಲಾದ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...