alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಇಲ್ಲಿ ಮಾತ್ರ ಸಿದ್ಧವಾಗಲಿದೆ ‘ಆಧಾರ್’ ಕಾರ್ಡ್

ಆಧಾರ್ ಕಾರ್ಡ್ ಗಾಗಿ ಇನ್ಮುಂದೆ ಅಲ್ಲಿ ಇಲ್ಲಿ ಅಲೆಯಬೇಕಾಗಿಲ್ಲ. ಅಂಚೆ ಕಚೇರಿಯಲ್ಲಿಯೇ ಸುಲಭವಾಗಿ ನೀವು ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ. ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಜನರಿಗೆ ಈ ಸೇವೆ ನೀಡಲು ನಿರ್ಧರಿಸಿದೆ. ಇದಕ್ಕಾಗಿ 600 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಅಂಚೆ ಸೇವೆಯ ಉಪ ನಿರ್ದೇಶಕ ಆರ್.ಬಿ. ತ್ರಿಪಾಠಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿಯೇ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಶುರುವಾಗಲಿದ್ದು, ಫೆಬ್ರವರಿ ನಂತ್ರ ಜನರು ಆಧಾರ್ ಕಾರ್ಡ್ ಅರ್ಜಿಯನ್ನು ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದು ಎಂದಿದ್ದಾರೆ.

ಸಿಎಸ್ಸಿ ಸೇರಿದಂತೆ ಕೆಲ ಕಂಪನಿಗಳ ಕೇಂದ್ರ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಿ ಕೊಡಲಾಗ್ತಾಯಿತ್ತು. ಹಿಂದಿನ ವರ್ಷ ಸೆಪ್ಟೆಂಬರ್ ನಂತ್ರ ಕೇವಲ ಸರ್ಕಾರಿ ಕಚೇರಿಯಲ್ಲಿ ಮಾತ್ರ ಜನರಿಗೆ ಈ ಸೌಲಭ್ಯ ಸಿಗ್ತಿತ್ತು. ಆಧಾರನ್ನು ಇನ್ನಷ್ಟು ಗೌಪ್ಯ ಮಾಡಲು ಮುಂದಾಗಿರುವ ಸರ್ಕಾರ, ಅಂಚೆ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ನೀಡಿದೆ.

ಆಧಾರ್ ಕಾರ್ಡ್ ತಯಾರಿಕೆ ಹಾಗೂ ತಿದ್ದುಪಡಿ ಕೆಲಸಕ್ಕೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಆಧಾರ್ ಕೆಲಸ ಮಾಡಲು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಒಂದು ಸುತ್ತಿನ ಪರೀಕ್ಷೆ ನಡೆದಿದೆ. ಶೀಘ್ರದಲ್ಲಿಯೇ ಅಂಚೆ ಕಚೇರಿಗೆ ಉಪಕರಣ ಒದಗಿಸುವುದಾಗಿ ಇಲಾಖೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...