alex Certify
ಕನ್ನಡ ದುನಿಯಾ       Mobile App
       

Kannada Duniya

ತಡೆರಹಿತ ವಿಮಾನಯಾನಕ್ಕಾಗಿ ಆಧಾರ್ ಲಿಂಕಿಂಗ್

ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆಗಲು ಸಾಕಷ್ಟು ಸಮಯ ಹಿಡಿಯುತ್ತದೆ. ದಾಖಲೆಗಳು ಮತ್ತು ಲಗೇಜ್ ಚೆಕಿಂಗ್ ಗೆ ಗಂಟೆಗಟ್ಟಲೆ ಕಾಯಬೇಕು. ಆದ್ರೆ ಇನ್ಮೇಲೆ ಅಂಥ ಸಮಸ್ಯೆ ಇರುವುದಿಲ್ಲ. 2018ರಿಂದ ಡೊಮೆಸ್ಟಿಕ್ ವಿಮಾನಯಾನ ಮಾಡುವವರು ಆರಾಮಾಗಿ ತೆರಳಬಹುದು.

ಆಧಾರ್ ಲಿಂಕ್ ಮಾಡುವ ಮೂಲಕ ತಡೆರಹಿತ ವಾಯುಯಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಡಿಜಿ ಯಾತ್ರಾ ಯೋಜನೆ ಅಡಿಯಲ್ಲಿ ಕೋಲ್ಕತ್ತಾ, ಅಹಮದಾಬಾದ್ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಆಧಾರ್ ಆಧರಿತ ತಡೆರಹಿತ ವಾಯುಯಾನಕ್ಕೆ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಯೋಗಾತ್ಮಕವಾಗಿ ಇದನ್ನು ಜಾರಿ ಮಾಡಲಾಗುತ್ತಿದ್ದು, ಯಶಸ್ವಿಯಾದ್ರೆ ಉಳಿದ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ. ಪ್ರಯಾಣಿಕರು ಏರ್ಪೋರ್ಟ್ ಟರ್ಮಿನಲ್ ಪ್ರವೇಶಿಸಲು ಬಯೋಮೆಟ್ರಿಕ್ಸ್ ಅಳವಡಿಸಲಾಗುತ್ತದೆ.

ಆಧಾರ್ ಕಾರ್ಡ್ ಲಿಂಕ್ ಮಾಡಿರುವುದರಿಂದ ಪ್ರಯಾಣಿಕರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಆನ್ ಲೈನ್ ನಲ್ಲೇ ಲಭ್ಯವಾಗುತ್ತವೆ. ಹಾಗಾಗಿ ಐಡಿ ಕಾರ್ಡ್, ಟಿಕೆಟ್, ಬೋರ್ಡಿಂಗ್ ಐಡಿಯನ್ನೆಲ್ಲ ಮತ್ತೆ ಅಧಿಕಾರಿಗಳಿಗೆ ತೋರಿಸುವ ಅಗತ್ಯವಿರುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...