alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ್ಯಾವ ಸೇವೆಗೆ ‘ಆಧಾರ್’ ಅನಿವಾರ್ಯ ಗೊತ್ತಾ…?

ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ, ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಗೆ ಒಪ್ಪಿಗೆ ನೀಡಿದ್ದಾರೆ. ಆಧಾರ್ ಬಗ್ಗೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಕೆಲ ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದಿದೆ. ಯಾವುದಕ್ಕೆ ಆಧಾರ್ ಅಗತ್ಯ ಹಾಗೂ ಯಾವುದಕ್ಕೆ ಆಧಾರ್ ಅನಗತ್ಯ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ವಿವರವಾಗಿ ಮಾಹಿತಿ ನೀಡಿದೆ.

ಈ ಯೋಜನೆಗೆ ಆಧಾರ್ ಅನಿವಾರ್ಯ :

  1. ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.
  2. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದಕ್ಕೆ ಆಧಾರ್ ಅತ್ಯಗತ್ಯ.
  3. ಸಮಾಜ ಕಲ್ಯಾಣ ಯೋಜನೆ ಹಾಗೂ ಸಬ್ಸಿಡಿಗಳಿಗೆ ಆಧಾರ್ ಅನಿವಾರ್ಯ.

ಆಧಾರ್ ಯಾವುದಕ್ಕೆ ಕಡ್ಡಾಯವಲ್ಲ ? :

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ.

ಖಾಸಗಿ ಕಂಪನಿಗಳಿಗೆ ಆಧಾರ್ ಅನಿವಾರ್ಯವಲ್ಲ.

ಶಾಲೆ-ಕಾಲೇಜುಗಳಿಗೆ ಆಧಾರ್ ನೀಡಬೇಕಾಗಿಲ್ಲ.

ಯುಜಿಸಿ, ನೀಟ್ ಮತ್ತು ಸಿಬಿಎಸ್ಇ ಪರೀಕ್ಷೆಗಳಿಗೆ ಆಧಾರ್ ಅನಿವಾರ್ಯವಲ್ಲ

ಮೊಬೈಲ್ ಸಿಮ್ ಗೆ ಆಧಾರ್ ಕಡ್ಡಾಯವಲ್ಲ.

ಇ-ಕಾಮರ್ಸ್ ಕಂಪನಿಗಳು ಆಧಾರ್ ಕೇಳುವಂತಿಲ್ಲ.

ಮೊಬೈಲ್ ನಂಬರ್ ಜೊತೆ ಆಧಾರ್ ನಂಬರ್ ಜೋಡಿಸಬೇಕಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...