alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.31ರೊಳಗೆ ಮಾಡಿ ಆಧಾರ್-ಇನ್ಷೂರೆನ್ಸ್ ಪಾಲಿಸಿ ಲಿಂಕ್

ಮ್ಯೂಚ್ಯುವಲ್ ಫಂಡ್, ಇನ್ಷೂರೆನ್ಸ್ ಪಾಲಿಸಿ, ನೌಕರರ ಭವಿಷ್ಯ ನಿಧಿ ಹೀಗೆ ಎಲ್ಲಾ ಯೋಜನೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಡಿಸೆಂಬರ್ 31ರೊಳಗೆ ನಿಮ್ಮ ಇನ್ಷೂರೆನ್ಸ್ ಪಾಲಿಸಿಗೆ ಆಧಾರ್ ಲಿಂಕ್ ಮಾಡಲೇಬೇಕು.

ನಕಲಿ ಕ್ಲೇಮ್ ಗಳನ್ನು ತಡೆಯಲು ಸರ್ಕಾರ ಆಧಾರ್ ಕಡ್ಡಾಯ ಮಾಡಿದೆ. ಪಾಲಿಸಿದಾರರು ಹಾಗೂ ಇನ್ಷೂರೆನ್ಸ್ ಕಂಪನಿಗಳು ಸರ್ಕಾರದ ಈ ನಡೆಯನ್ನು ಸ್ವಾಗತಿಸಿವೆ. ಆದ್ರೆ ಡಿಸೆಂಬರ್ 31ರವರೆಗೆ ಮಾತ್ರ ಸರ್ಕಾರ ಗಡುವು ನೀಡಿರೋದು ಎಲ್ಲರನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಇಷ್ಟು ಕಡಿಮೆ ಸಮಯದಲ್ಲಿ ಎಲ್ಲಾ ಪಾಲಿಸಿದಾರರ ದಾಖಲೆಗಳನ್ನು ಸಂಗ್ರಹಿಸಿ ಆಧಾರ್ ಲಿಂಕ್ ಮಾಡುವುದು ಪ್ರಯಾಸದ ಕೆಲಸ. ನವೀಕರಣ ಹಂತದಲ್ಲಿರೋ ಪಾಲಿಸಿಗಳ ಕೆವೈಸಿ ದಾಖಲೆಗಳನ್ನು ಕೂಡ ಸಂಗ್ರಹಿಸಬೇಕು.

ಜೀವ ವಿಮೆ ಹಾಗೂ ಜನರಲ್ ಇನ್ಷೂರೆನ್ಸ್ ಎರಡಕ್ಕೂ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡಲಾಗಿದೆ. ಸರ್ಕಾರ ವಿಧಿಸಿರುವ ಗಡುವಿಗೂ ಮುನ್ನ ನಿಮ್ಮ ಇನ್ಷೂರೆನ್ಸ್ ಪಾಲಿಸಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ. ಇಲ್ಲದೇ ಹೋದಲ್ಲಿ ಸಮಸ್ಯೆಗಳು ಎದುರಾಗಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...