alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆ ವಹಿವಾಟಿಗೂ ಆಧಾರ್ ಕಡ್ಡಾಯ

ಷೇರು ಮಾರುಕಟ್ಟೆ ಮೂಲಕ ನಡೆಸುವ ಅಕ್ರಮ ಹಣಕಾಸು ವಹಿವಾಟು ಹಾಗೂ ತೆರಿಗೆ ವಂಚನೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಜಾರಿ ಮಾಡಿದೆ. ಎಲ್ಲಾ ಷೇರ್ ಬ್ರೋಕರ್ ಗಳಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ.

ಡಿಸೆಂಬರ್ 31ರೊಳಗಾಗಿ BSE ಸೆನ್ಸೆಕ್ಸ್ ಹಾಗೂ NSE ನಿಫ್ಟಿ ತಮ್ಮ ಎಲ್ಲಾ ಗ್ರಾಹಕರ ಆಧಾರ್ ವಿವರವನ್ನು ಪಡೆಯುವಂತೆ ಸೆಬಿ ಸೂಚಿಸಿದೆ. ಹಾಗಾಗಿ ಇನ್ಮೇಲೆ ಷೇರು ವ್ಯವಹಾರಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಈ ವರ್ಷಾಂತ್ಯದೊಳಗೆ ಆಧಾರ್ ವಿವರ ಸಲ್ಲಿಸದ ಗ್ರಾಹಕರ ಖಾತೆಯನ್ನೇ ಬಂದ್ ಮಾಡುವಂತೆ ಸೆಬಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಹೊಸ ಖಾತೆದಾರರು, ಡಿಮ್ಯಾಟ್ ಅಕೌಂಟ್ ತೆರೆದು 6 ತಿಂಗಳುಗಳೊಳಗಾಗಿ ತಮ್ಮ ಆಧಾರ್ ವಿವರವನ್ನು ಸಲ್ಲಿಸುವುದು ಕಡ್ಡಾಯ. ಹತ್ತಾರು ನಕಲಿ ಪ್ಯಾನ್ ನಂಬರ್ ಬಳಸಿ ಅಕ್ರಮ ಷೇರು ವಹಿವಾಟು ಹಾಗೂ ತೆರಿಗೆ ವಂಚನೆ ಮಾಡಿರೋದು ಬಯಲಾಗಿತ್ತು. ಲಕ್ಷಾಂತರ ನಕಲಿ ಪ್ಯಾನ್ ಕಾರ್ಡ್ ಗಳನ್ನು ಕೂಡ ಸರ್ಕಾರ ನಿಷ್ಕ್ರಿಯಗೊಳಿಸಿತ್ತು.

ಅಕ್ರಮ ಹಣಕಾಸು ವಹಿವಾಟಿಗೆ ಷೇರು ಮಾರುಕಟ್ಟೆಯನ್ನೇ ವಂಚಕರು ಬಳಸಿಕೊಳ್ಳುತ್ತಿರುವುದರಿಂದ ಅಂಥವರಿಗೆ ಸರ್ಕಾರ ಮೂಗುದಾರ ಹಾಕ್ತಿದೆ. ಡಿಸೆಂಬರ್ 31ರೊಳಗೆ ಗ್ರಾಹಕರು ಆಧಾರ್ ವಿವರವನ್ನು ಸಲ್ಲಿಸದೇ ಇದ್ದಲ್ಲಿ ಅವರ ಖಾತೆಯನ್ನು ಸೀಝ್ ಮಾಡುವುದಾಗಿ ಬಿ ಎಸ್ ಇ ಎಚ್ಚರಿಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...