alex Certify
ಕನ್ನಡ ದುನಿಯಾ       Mobile App
       

Kannada Duniya

2016 ರ ದೆಹಲಿ ಕ್ರೈಂ ರಿಪೋರ್ಟ್….

rape

ಕಳೆದ ವರ್ಷಕ್ಕೆ ಹೋಲಿಸಿದ್ರೆ 2016 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧ ಚಟುವಟಿಕೆಯ ಪ್ರಮಾಣ ಕೊಂಚ ತಗ್ಗಿದೆ. ಆದ್ರೆ ವಾಹನ ಕಳವು ಪ್ರಕರಣಗಳು ಮಾತ್ರ ಹೆಚ್ಚಿವೆ.

ದೆಹಲಿ ಪೊಲೀಸರ ಮಾಹಿತಿ ಪ್ರಕಾರ 2015 ರಲ್ಲಿ 5328 ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದ್ವು, ಈ ವರ್ಷ ಆ ಸಂಖ್ಯೆ 4005 ಕ್ಕೆ ಇಳಿದಿದೆ. ಇನ್ನು ಕಳೆದ ವರ್ಷ 7141 ದರೋಡೆ ಪ್ರಕರಣಗಳು ನಡೆದಿದ್ದು, ಈ ವರ್ಷ 4538 ರಾಬರಿ ಕೇಸ್ ದಾಖಲಾಗಿದೆ. ಆಘಾತಕಾರಿ ಅಂಶ ಅಂದ್ರೆ ದೆಹಲಿಯಲ್ಲಿ ಪ್ರತಿ 4 ಗಂಟೆಗೆ ಒಂದರಂತೆ ಅತ್ಯಾಚಾರ ಪ್ರಕರಣಗಳು ನಡೆದಿವೆ. ಕಳೆದ ವರ್ಷ 2069 ಅತ್ಯಾಚಾರ ಪ್ರಕರಣ ದಾಖಲಾಗಿತ್ತು, ಈ ವರ್ಷ 2029 ರೇಪ್ ಕೇಸ್ ದಾಖಲಾಗಿದೆ.

ಆದ್ರೆ ಎಫ್ಐಆರ್ ದಾಖಲು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷ 1.81 ಲಕ್ಷ ಎಫ್ಐಆರ್ ಹಾಕಲಾಗಿತ್ತು, ಈ ಬಾರಿ 1.91 ಲಕ್ಷ ಎಫ್ಐಆರ್ ದಾಖಲು ಮಾಡಲಾಗಿದೆ. ದರೋಡೆ ಪ್ರಕರಣದಲ್ಲಿ ಶೇ.35.45 ಇಳಿಕೆಯಾಗಿರುವುದಕ್ಕೆ ನೋಟು ನಿಷೇಧವೇ ಕಾರಣ ಎನ್ನಲಾಗುತ್ತಿದೆ. ನೋಟು ನಿಷೇಧದ ನಂತರ ಅಂದ್ರೆ ನವೆಂಬರ್ 8 ರಿಂದ ಡಿಸೆಂಬರ್ 9 ರವರೆಗೆ 315 ರಾಬರಿ ಕೇಸ್ ಗಳು ನಡೆದಿವೆ, ಕಳೆದ ವರ್ಷ ಈ ಅವಧಿಯಲ್ಲಿ 561 ದರೋಡೆ ಪ್ರಕರಣ ದಾಖಲಾಗಿತ್ತು.

ಕೊಲೆ ಕೇಸ್ ಗಳು ಕೂಡ 530 ರಿಂದ 490ಕ್ಕೆ ಇಳಿದಿವೆ. ಆದ್ರೆ ವರ್ಷಪೂರ್ತಿ ದೆಹಲಿ ಪೊಲೀಸರು ವಿವಾದದ ಸುಳಿಯಲ್ಲಿ ಸಿಲುಕಿದ್ದರು. ದೇಶದ್ರೋಹಿ ಘೋಷಣೆ ಹಿನ್ನೆಲೆಯಲ್ಲಿ ಜೆ ಎನ್ ಯು ವಿದ್ಯಾರ್ಥಿ ಬಂಧನದಿಂದ ಹಿಡಿದು ಹಲವು ಪ್ರಕರಣಗಳಲ್ಲಿ ವಿವಾದವೂ ಜೊತೆಯಾಗಿತ್ತು. ವಾಹನ ಕಳ್ಳರನ್ನು ಹಿಡಿಯುವಲ್ಲಿ ಮಾತ್ರ ಪೊಲೀಸರು ಈ ವರ್ಷ ವಿಫಲರಾಗಿದ್ದಾರೆ. ಕಳೆದ ವರ್ಷಕ್ಕಿಂತ್ಲೂ 5250 ಅಧಿಕ ವಾಹನಗಳು ಈ ಬಾರಿ ಕಳವಾಗಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...