alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ವಿಶ್ವದ ಈ ದುಬಾರಿ ಕಾರಿನ ಬೆಲೆ

rolls-royce-swept

ನವದೆಹಲಿ: ಈ ಕಾರಿನ ಬೆಲೆ ಕೇಳಿದ್ರೇ ನಿಜಕ್ಕೂ ದಂಗಾಗುತ್ತೀರಿ. ಅಷ್ಟಕ್ಕೂ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿದ್ದೀರಿ.

5 -10 ಕೋಟಿ ರೂ. ಇರಬಹುದೆಂದು ನಿಮ್ಮ ಊಹೆಯಾಗಿದ್ದರೆ ಇಲ್ನೋಡಿ. ಈ ಕಾರಿನ ಬೆಲೆ ಬರೋಬ್ಬರಿ 84 ಕೋಟಿ ರೂ. ಐಷಾರಾಮಿ ಕಾರ್ ತಯಾರಿಕಾ ಕಂಪನಿಯಾಗಿರುವ ರೋಲ್ಸ್ ರಾಯ್ಸ್ ವಿಶ್ವದಲ್ಲಿಯೇ ಅತ್ಯಂತ ದುಬಾರಿ ವೆಚ್ಚದ ಕಾರನ್ನು ತಯಾರಿಸಿದೆ.

ಶ್ರೀಮಂತರೊಬ್ಬರು ತಮಗೆ ಇಷ್ಟವಾಗುವಂತೆ ಕಾರ್ ಸಿದ್ಧಪಡಿಸಿಕೊಡುವಂತೆ ಮಾಡಿದ ಮನವಿ ಮೇರೆಗೆ ರೋಲ್ಸ್ ರಾಯ್ಸ್ ಸ್ವೈಪ್ ಟೇಲ್ ಕಾರನ್ನು ತಯಾರಿಸಿದ್ದು, ಇದರ ಬೆಲೆ 84 ಕೋಟಿ ರೂ. ಆಗಿದೆ.

ಈ ಕಾರನ್ನು ತಯಾರಿಸಲು 4 ವರ್ಷ ತಗುಲಿದೆ. ಇದರಲ್ಲಿರುವ ಬಟನ್ ಹಾಗೂ ಸ್ವಿಚ್ ಗಳಿಗೆ ಮಕಾಸರ್ ಎಬೊನಿ ಮರ ಬಳಸಲಾಗಿದೆ.

1920 ರ ದಶಕದ ರೀತಿಯಲ್ಲಿ ಇದ್ದ ಕಾರುಗಳನ್ನು ಹೋಲುವಂತೆ ಇದನ್ನು ತಯಾರಿಸಿದ್ದು, 2 ಆಸನಗಳಿವೆ. ಟಾಪ್ ಗಾಜಿನಿಂದ ಆವೃತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...