alex Certify
ಕನ್ನಡ ದುನಿಯಾ       Mobile App
       

Kannada Duniya

100 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ಈ ವಿಶಿಷ್ಟ ನೋಟು

1918ರ ಜನವರಿ 2ರಂದು ಭಾರತದಲ್ಲಿ ಬ್ರಿಟಿಷ್ ಸರ್ಕಾರ ವಿಶಿಷ್ಟವಾದ ಬ್ಯಾಂಕ್ ನೋಟ್ ಒಂದನ್ನು ಚಲಾವಣೆಗೆ ತಂದಿತ್ತು. ಅದರ ಮುಖಬೆಲೆ 2.5 ರೂಪಾಯಿ. ಈ ನೋಟು ಚಲಾವಣೆಗೆ ಬಂದು ಇಂದಿಗೆ ಬರೋಬ್ಬರಿ ನೂರು ವರ್ಷಗಳು ಕಳೆದಿವೆ.

ಎರಡೂವರೆ ರೂಪಾಯಿ ನೋಟನ್ನು ಇಂಗ್ಲೆಂಡ್ ನಲ್ಲಿ ಮುದ್ರಣ ಮಾಡಲಾಗಿತ್ತಂತೆ. ಅದು ಕೂಡ ಕೈಯಿಂದ್ಲೇ ತಯಾರಿಸಿದ ಕಾಗದದ ಮೇಲೆ. ನೋಟಿನ ಮೇಲೆ ಚಕ್ರವರ್ತಿ ಜಾರ್ಜ್ ವಿ ಎಂಬ ಲಾಂಛನವಿತ್ತು. ಜೊತೆಗೆ ಬ್ರಿಟನ್ ನ ಹಣಕಾಸು ಕಾರ್ಯದರ್ಶಿ ಎಂ.ಎಂ.ಎಸ್. ಗುಬ್ಬೇ ಅವರ ಸಹಿಯಿತ್ತು.

ನೋಟಿನ ಮುಖಬೆಲೆಯನ್ನು 8 ಭಾರತೀಯ ಭಾಷೆಗಳಲ್ಲಿ ಮುದ್ರಿಸಲಾಗಿತ್ತು. ಆ ಸಮಯದಲ್ಲಿ 2.5 ರೂಪಾಯಿಯ ನಿಖರ ಮೌಲ್ಯ 1 ಡಾಲರ್. 1926ರ ಜನವರಿ 1ರಂದು ಈ ನೋಟನ್ನು ನಿಷೇಧ ಮಾಡಲಾಗಿತ್ತು. ತೆರೆಮರೆಗೆ ಸರಿದಿದ್ದ 2.5 ರೂಪಾಯಿ ನೋಟನ್ನು 2015 ಡಿಸೆಂಬರ್ ರಂದು ಹರಾಜು ಹಾಕಲಾಗಿದೆ. 6,40,000 ರೂಪಾಯಿಗೆ ಈ ನೋಟು ಹರಾಜಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...