alex Certify
ಕನ್ನಡ ದುನಿಯಾ       Mobile App
       

Kannada Duniya

8ನೇ ತರಗತಿ ಪಾಸ್ ಆದವರಿಗೂ ಸಿಗುತ್ತೆ ಅಂಚೆ ಕಚೇರಿ ಫ್ರಾಂಚೈಸಿ

ಮೋದಿ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ನಶಿಸುತ್ತಿದ್ದ ಅಂಚೆ ಕಚೇರಿಗಳಿಗೆ ಜೀವ ಬಂದಿದೆ. ಪೋಸ್ಟ್ ಆಫೀಸ್ ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಪೋಸ್ಟ್ ಆಫೀಸ್ ಗಳಲ್ಲಿ ಬೇರೆ ಬೇರೆ ಸೇವೆಗಳು ಸಿಗ್ತಿದ್ದು,ಜನ ಅಂಚೆ ಕಚೇರಿಯತ್ತ ಮುಖ ಮಾಡ್ತಿದ್ದಾರೆ. ದೇಶದಲ್ಲಿ 1.55 ಲಕ್ಷ ಅಂಚೆ ಕಚೇರಿಗಳಿವೆ. ಆದ್ರೆ ಪೋಸ್ಟ್ ಆಫೀಸ್ ಇಲ್ಲದ ಅನೇಕ ಪ್ರದೇಶಗಳು ಭಾರತದಲ್ಲಿವೆ. ಅಂಚೆ ಇಲಾಖೆ ಅಂಚೆ ಕಚೇರಿ ತೆರೆಯಲು ಫ್ರಾಂಚೈಸಿ ನೀಡ್ತಿದೆ.ಈ ಮೂಲಕ ಉತ್ತಮ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ.

ನೀವೂ ಫ್ರಾಂಚೈಸಿ ತೆರೆಯಲು ಆಸಕ್ತರಾಗಿದ್ದರೆ ಕನಿಷ್ಠ 5000 ರೂಪಾಯಿಯನ್ನು ಭದ್ರತಾ ಠೇವಣಿಯಾಗಿ ಇಡಬೇಕು.ಫ್ರಾಂಚೈಸಿ ಮೂಲಕ ಗ್ರಾಹಕರಿಗೆ ಸ್ಟಾಂಪ್,ಸ್ಟೇಷನರಿ,ಸ್ಪೀಡ್ ಪೋಸ್ಟ್,ಮನಿ ಆರ್ಡರ್ ಬುಕ್ಕಿಂಗ್ ಸೇರಿದಂತೆ ಅನೇಕ ಸೌಲಭ್ಯಗಳು ಸಿಗಲಿವೆ.

ಕಡಿಮೆ ಶಿಕ್ಷಣ ಪಡೆದ ಅಭ್ಯರ್ಥಿಗಳು ಕೂಡ ಇದ್ರ ಫ್ರಾಂಚೈಸಿ ಪಡೆಯಬಹುದು. ಭಾರತ ಅಂಚೆ ಇಲಾಖೆ ಪ್ರಕಾರ 8ನೇ ತರಗತಿ ಪಾಸ್ ಆದ ಅಭ್ಯರ್ಥಿ ಫ್ರಾಂಚೈಸಿ ಪಡೆಯಬಹುದಾಗಿದೆ.  https://www.indiapost.gov.in/VAS/DOP_PDFFiles/Franchise.pdf ನಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಗೂಡಂಗಡಿಯಿಂದ ಹಿಡಿದು ದೊಡ್ಡ ಅಂಗಡಿ ವ್ಯಾಪಾರಿಗಳು ಕೂಡ ಫ್ರಾಂಚೈಸಿ ಪಡೆಯಬಹುದು. ಬೇರೆ ಬೇರೆ ಸೇವೆಗೆ ಬೇರೆ ಬೇರೆ ಹಣ ನಿಗಧಿಯಾಗಿರುತ್ತದೆ. ಅಂಚೆ ಕಚೇರಿ ನೌಕರರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ 18 ವರ್ಷ ಮೇಲ್ಪಟ್ಟ ಎಲ್ಲರೂ ಇದಕ್ಕೆ ಅರ್ಜಿ ಸಲ್ಲಿಸಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...