alex Certify
ಕನ್ನಡ ದುನಿಯಾ       Mobile App
       

Kannada Duniya

ಫೆಬ್ರವರಿ 27 ರಂದು ಚಿನ್ನದ ಬಾಂಡ್ ರಿಲೀಸ್

gold-bon

ನವದೆಹಲಿ: ಈಗಾಗಲೇ 6 ಹಂತದ ಚಿನ್ನದ ಬಾಂಡ್(ಎಸ್.ಬಿ.ಜಿ. ಯೋಜನೆ)ಗಳನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಇದೇ ಫೆಬ್ರವರಿ 27 ರಂದು 7 ನೇ ಹಂತದ ಬಾಂಡ್ ಗಳನ್ನು ರಿಲೀಸ್ ಮಾಡಲಿದೆ.

ಈ ಯೋಜನೆಯಡಿ 500 ಗ್ರಾಂ ಚಿನ್ನದ ದರಕ್ಕೆ ಸಮನಾದ ಬಾಂಡ್ ಪಡೆದುಕೊಳ್ಳಬಹುದು. ಈ ಯೋಜನೆಯಡಿ 5 ಹಂತಗಳಲ್ಲಿ 3060 ಕೋಟಿ ರೂ ಸಂಗ್ರಹಿಸಲಾಗಿದೆ.

ಪ್ರಸಕ್ತ ಆರ್ಥಿಕ ಸಾಲಿನ ಕೊನೆಯ ಹಂತದ ಚಿನ್ನದ ಬಾಂಡ್ ಬಿಡುಗಡೆ ಇದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚನೆ ನಡೆಸಿ 7 ನೇ ಹಂತದ ಬಾಂಡ್ ಬಿಡುಗಡೆಗೆ ಕೇಂದ್ರ ತೀರ್ಮಾನಿಸಿದೆ ಎಂದು ಆರ್ಥಿಕ ಸಚಿವಾಲಯ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...