alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ‘ಬಂಪರ್’ ನ್ಯೂಸ್

ಸರ್ಕಾರಿ ನೌಕರರಿಗೆ ಅದರಲ್ಲೂ ರೈಲ್ವೆ ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಹತ್ತು ಸಾವಿರ ರೂ. ಗಳವರೆಗೆ ವೇತನ ಹೆಚ್ಚಳ ಮಾಡಲು ಮುಂದಾಗಿದೆ.

ಮಂಗಳವಾರದಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವೇತನ ಹೆಚ್ಚಳದ ಶಿಫಾರಸ್ಸು ಕುರಿತ ಕಡತವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಶೀಘ್ರದಲ್ಲೇ ವೇತನ ಹೆಚ್ಚಳದ ಕುರಿತು ಆದೇಶ ಹೊರ ಬೀಳಲಿದ್ದು, ಇದರಿಂದಾಗಿ ರೈಲ್ವೆ ನೌಕರರು ಹತ್ತು ಸಾವಿರ ರೂ.ಗಳವರೆಗೆ ಹೆಚ್ಚಿನ ವೇತನ ಪಡೆಯಲಿದ್ದಾರೆ. ಜೊತೆಗೆ ರೈಲು ಚಾಲಕರು ಈವರೆಗೆ ಪ್ರತಿ 100 ಕಿಲೋಮೀಟರ್ ಗೆ ಪಡೆಯುತ್ತಿದ್ದ 235 ರೂ. ರನ್ನಿಂಗ್ ಅಲೋಯನ್ಸ್ 525 ರೂ. ಗಳಿಗೆ ಹೆಚ್ಚಳವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...