alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ವಿವಾದಕ್ಕೆ ತೆರೆ ಎಳೆದ ಐಟಿ ಇಲಾಖೆ

tax

ಈ ವರ್ಷ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳವಾಗಿರೋ ವಿಚಾರ ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿದ ಅಂಕಿ- ಅಂಶಕ್ಕೂ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೀಡಿದ ಸಂಖ್ಯೆಗೂ ವ್ಯತ್ಯಾಸವಿದ್ದಿದ್ರಿಂದ ಸರ್ಕಾರ ಸುಳ್ಳು ಹೇಳ್ತಿದ್ಯಾ ಅನ್ನೋ ಅನುಮಾನ ಜನರಲ್ಲಿ ಮೂಡಿತ್ತು.

ಈಗ ಆದಾಯ ತೆರಿಗೆ ಇಲಾಖೆ ಅದಕ್ಕೆ ಸ್ಪಷ್ಟನೆ ನೀಡಿದೆ. ಪ್ರಧಾನಿ ಮೋದಿ ನೀಡಿದ ಅಂಕಿ-ಅಂಶ ಸರಿಯಾಗಿದ್ದು, ಈ ವರ್ಷ ಹೊಸದಾಗಿ 56 ಲಕ್ಷ ತೆರಿಗೆ ಪಾವತಿದಾರರು ಸೇರ್ಪಡೆಯಾಗಿದ್ದಾರೆ ಅಂತಾ ಹೇಳಿದೆ. ಕಳೆದ ವರ್ಷ 2.23 ಕೋಟಿ ಜನರು ತೆರಿಗೆ ಪಾವತಿ ಮಾಡಿದ್ರು, ಈ ಬಾರಿ ತೆರಿಗೆ ಪಾವತಿದಾರರ ಸಂಖ್ಯೆ 2.79 ಕೋಟಿಗೆ ಏರಿಕೆ ಆಗಿದೆ.

2015ರಲ್ಲಿ 2 ಕೋಟಿ ಇ-ರಿಟರ್ನ್ಸ್ ಪಾವತಿಯಾಗಿತ್ತು. 2016ರಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 23 ಲಕ್ಷದಷ್ಟು ಹೆಚ್ಚಾಗಿತ್ತು. ಈ ಬಾರಿ ನೀಡಿರುವ ಅಂಕಿ – ಅಂಶದಲ್ಲೂ ಯಾವುದೇ ರೀತಿಯ ಸುಳ್ಳು ಮಾಹಿತಿ ಇಲ್ಲ ಅಂತಾ ಐಟಿ ಇಲಾಖೆ ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...