alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ಹೆಚ್ಚು ಸರ್ಚ್ ಆದ 5 ಐಷಾರಾಮಿ ಕಾರ್

oem-name0

ಈ ಬಾರಿ ಐಷಾರಾಮಿ ಕಾರು ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಪ್ರಸಿದ್ಧ ಕಾರು ಕಂಪನಿಗಳು ಹೊಸ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಮರ್ಸಿಡಿಸ್ ಬೆಂಝ್ ಕಂಪನಿಯೊಂದೇ 13 ಕಾರುಗಳನ್ನು ಪರಿಚಯಿಸಿದೆ.

ಬಿಎಂಡಬ್ಲ್ಯೂ 3 ಸಿರೀಸ್, 5 ಸಿರೀಸ್ ಹಾಗೂ ಎಕ್ಸ್ 3, ಎಕ್ಸ್ 5 ಯನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದೇ ವರ್ಷ ಜಾಗ್ವಾರ್ ಕಂಪನಿಯ ಎಫ್ ಎಸ್ ಹಾಗೂ ಎಕ್ಸ್ ಇ ಎಸ್ಯುವಿ ಕೂಡ ಭಾರತ ಮಾರುಕಟ್ಟೆ ಪ್ರವೇಶ ಮಾಡಿದೆ. ಆಡಿ ಎ4 ಮತ್ತು ವೋಲ್ವೋ ಸೆಡಾನ್ ಎಸ್ 90ಯನ್ನು ತನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದೆ.

ಇನ್ನು ಕಾರ್ ದೇಖೋ ಪೋರ್ಟಲ್ ನಲ್ಲಿ ಈ ವರ್ಷ ಐದು ಐಷಾರಾಮಿ ಕಾರುಗಳ ಹುಡುಕಾಟ ಜೋರಾಗಿ ನಡೆದಿದೆ.

ಅತಿ ಹೆಚ್ಚು ಸರ್ಚ್ ಆದ ಐದು ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಆಡಿ ಕ್ಯೂ 7 ಐದನೇ ಸ್ಥಾನದಲ್ಲಿದೆ. ಕಾರ್ ದೇಖೋ ಪೋರ್ಟಲ್ ನಲ್ಲಿ ಇದನ್ನು 3 ಲಕ್ಷ ಬಾರಿ ನೋಡಲಾಗಿದೆ.

ನಾಲ್ಕನೇ ಸ್ಥಾನದಲ್ಲಿ ಮರ್ಸಿಡಿಸ್ ಬೆಂಝ್ ಎ –ಕ್ಲಾಸ್ ಇದೆ. ಕಾರ್ ದೇಖೋ ಪೋರ್ಟಲ್ ನಲ್ಲಿ ಇದನ್ನು 3.13 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ.

ಬಿಎಂಡಬ್ಲ್ಯೂ ಎಕ್ಸ್ 1 ಕಾರು ಮೂರನೇ ಸ್ಥಾನದಲ್ಲಿದೆ. 3.25 ಲಕ್ಷ ಬಾರಿ ಈ ಕಾರಿನ ಬಗ್ಗೆ ಮಾಹಿತಿ ಹುಡುಕಲಾಗಿದೆ.

ಎರಡನೇ ಸ್ಥಾನದಲ್ಲಿರುವುದು ಬಿಎಂಡಬ್ಲ್ಯೂ 3 ಸಿರೀಸ್. ಜನವರಿ 2016 ರಂದು ಬಿಎಂಡಬ್ಲ್ಯೂ ಫೇಸ್ಲಿಫ್ಟ್ ಆವೃತ್ತಿ ಬಿಡುಗಡೆ ಮಾಡಿತ್ತು. ಈ ಐಷಾರಾಮಿ ಕಾರನ್ನು 3.29 ಲಕ್ಷಕ್ಕೂ ಹೆಚ್ಚು  ಬಾರಿ ಸರ್ಚ್ ಮಾಡಲಾಗಿದೆ.

ಹುಡುಕಾಟದ ಪಟ್ಟಿಯಲ್ಲಿ ಮೊದಲಿರುವುದು ಆಡಿ ಎ3. ನಾಲ್ಕು ಬಾಗಿಲು ಹಾಗೂ ಎರಡು ಬಾಗಿಲಿನ ಕಾರು ಭಾರತದಲ್ಲಿ ಲಭ್ಯವಿದೆ. ಕಾರ್ ದೇಖೋ ಪೋರ್ಟಲ್ ನಲ್ಲಿ 3.93 ಲಕ್ಷಕ್ಕೂ ಹೆಚ್ಚು ಬಾರಿ ಈ ಕಾರನ್ನು ಸರ್ಚ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...