alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರ್ ಖರೀದಿ ಮಾಡಿ… 5 ಸಾವಿರಕ್ಕಿಂತ ಕಡಿಮೆ ಇಎಂಐ ಕಟ್ಟಿ…!

ಕಾರ್ ಖರೀದಿ ಮಾಡಬೇಕೆಂಬುದು ಬಹುತೇಕರ ಕನಸು. ಕಾರ್ ಖರೀದಿಗೆ ಪ್ಲಾನ್ ಮಾಡಿದ್ದರೆ ನಿಮಗೊಂದು ಗುಡ್ ನ್ಯೂಸ್ ಇದೆ. ಕಾರ್ ಖರೀದಿ ಮಾಡೋದು ದೊಡ್ಡ ಸಂಗತಿಯಲ್ಲ, ತಿಂಗಳ ಇಎಂಐ ತಲೆ ನೋವಿನ ಕೆಲಸ ಎನ್ನುವವರು ಈ ಸುದ್ದಿ ಓದ್ಲೇ ಬೇಕು. ತಿಂಗಳಿಗೆ 10 ಸಾವಿರ ಇಎಂಐ ಭಾರವನ್ನು ತಲೆ ಮೇಲೆ ಹೊತ್ತು ತಿರುಗಾಡಬೇಕಿಲ್ಲ. 5 ಸಾವಿರಕ್ಕಿಂತ ಕಡಿಮೆ ಇಎಂಐ ತುಂಬಿ ಕಾರ್ ನಲ್ಲಿ ಲಾಂಗ್ ಡ್ರೈವ್ ಎಂಜಾಯ್ ಮಾಡಬಹುದು. ಯಸ್, ಕೆಲ ಕಂಪನಿಗಳು 5 ಸಾವಿರಕ್ಕಿಂತ ಕಡಿಮೆ ಇಎಂಐ ಆಫರ್ ಶುರು ಮಾಡಿವೆ.

ದೆಹಲಿ ಶೋ ರೂಂನಲ್ಲಿ Renault Kwid ಬೆಲೆ 2.67 ಲಕ್ಷ ರೂಪಾಯಿ. ಗ್ರಾಹಕ 50 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಬೇಕು. ನಂತ್ರ ಇಎಂಐ ಮೂಲಕ ಉಳಿದ ಹಣವನ್ನು ಕಟ್ಟಬಹುದು. ಐದು ವರ್ಷದ ಇಎಂಐ ಪ್ಲಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 4,718 ರೂಪಾಯಿ ತುಂಬಬೇಕಾಗುತ್ತದೆ.

ಮಾರುತಿ ಆಲ್ಟೋ 800 ಬೇಸ್ ವೇರಿಯಂಟ್ ಕಾರಿನ ಬೆಲೆ ಶೋ ರೂಂನಲ್ಲಿ 2.51 ಲಕ್ಷ ರೂಪಾಯಿಯಿದೆ. ಇಲ್ಲಿ ಕೂಡ ಗ್ರಾಹಕ 50 ಸಾವಿರ ಡೌನ್ಪೇಮೆಂಟ್ ಮಾಡಬೇಕಾಗುತ್ತದೆ. ಐದು ವರ್ಷದ ಐಎಂಐ ಪ್ಲಾನ್ ನಲ್ಲಿ 4370 ರೂಪಾಯಿ ಪ್ರತಿ ತಿಂಗಳು ತುಂಬಿದ್ರೆ ಸಾಕು.

ಡಸ್ಟನ್ ರೆಡಿ ಗೋ ಕಾರು ನಿಮ್ಮದಾಗಬೇಕೆಂದ್ರೆ 50 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಿ. ಈ ಕಾರಿನ ಬೆಲೆ 2.50 ಲಕ್ಷ ರೂಪಾಯಿ. ಐದು ವರ್ಷದ ಒಪ್ಪಂದದಲ್ಲಿ ಪ್ರತಿ ತಿಂಗಳು 4349 ರೂಪಾಯಿ ಐಎಂಐ ತುಂಬಬೇಕು.

ಹುಂಡೈ ಇಯೋನ್ ಕಾರಿನ ಬೆಲೆ 3.30 ಲಕ್ಷ ರೂಪಾಯಿ. ಈ ಕಾರಿಗೂ 50 ಸಾವಿರ ರೂಪಾಯಿ ನಗದನ್ನು ಪಾವತಿಸಬೇಕು. 7 ವರ್ಷದ ಒಪ್ಪಂದ ಮಾಡಿಕೊಂಡ್ರೆ ಪ್ರತಿ ತಿಂಗಳು 4794 ರೂಪಾಯಿ ಐಎಂಐ ನೀಡಬೇಕಾಗುತ್ತದೆ.

ಟಾಟಾ ಟಿಯಾಗೋ ಕೂಡ 5 ಸಾವಿರ ರೂಪಾಯಿಗಿಂತ ಕಡಿಮೆ ಐಎಂಐಗೆ ನಿಮಗೆ ಸಿಗಲಿದೆ. ಶೋ ರೂಂನಲ್ಲಿ ಇದ್ರ ಬೆಲೆ 3.35 ಲಕ್ಷ ರೂಪಾಯಿ. 7 ವರ್ಷದ ಒಪ್ಪಂದ ಮಾಡಿಕೊಂಡು ಗ್ರಾಹಕ ಪ್ರತಿ ತಿಂಗಳು 4880 ರೂಪಾಯಿ ಕಟ್ಟಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...