alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ 4ಜಿ ಇಂಟರ್ನೆಟ್ ಸ್ಪೀಡ್ ಕೇಳಿದ್ರೆ ಶಾಕ್ ಆಗ್ತೀರಾ…!

ಭಾರತ ಸಂಪೂರ್ಣ ಡಿಜಿಟಲ್ ಮಯವಾಗ್ತಿದೆ. ಆದ್ರೆ ಮೊಬೈಲ್ ಗಳಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಈಗಲೂ ಸವಾಲಾಗೇ ಉಳಿದಿದೆ. ಟೆಲಿಕಾಂ ಕಂಪನಿಗಳು ಬಂಪರ್ 4ಜಿ ಆಫರ್ ಗಳನ್ನು ಬಿಡುಗಡೆ ಮಾಡಿವೆ.

ಆದ್ರೆ ಭಾರತದ ಸರಾಸರಿ 4ಜಿ ಸ್ಪೀಡ್, ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಇದೆ. ಪಾಕಿಸ್ತಾನ, ಅಲ್ಜೀರಿಯಾ, ಕಜಕಿಸ್ತಾನ, ಟ್ಯುನಿಶಿಯಾದಂತಹ ರಾಷ್ಟ್ರಗಳಲ್ಲಿ 4ಜಿ ಇಂಟರ್ನೆಟ್ ಸ್ಪೀಡ್ ಭಾರತಕ್ಕಿಂತ್ಲೂ ಅಧಿಕವಾಗಿದೆ.

ಭಾರತದ 4ಜಿ ಡೌನ್ಲೋಡ್ ಸ್ಪೀಡ್ 88 ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆ ಇದೆ.  2ಜಿ ಸೇವೆಯಿಂದ ಟೆಲಿಕಾಂ ಕಂಪನಿಗಳು ಅಪ್ ಗ್ರೇಡ್ ಆಗಿದ್ರೂ 4ಜಿಗೆ ತಕ್ಕಂತಹ ಸ್ಪೀಡ್ ಒದಗಿಸಲು ವಿಫಲವಾಗಿವೆ.

ಭಾರತದಲ್ಲಿ ಸರಾಸರಿ 4ಜಿ ಸ್ಪೀಡ್ 6mbps. ನೆರೆರಾಷ್ಟ್ರ ಪಾಕಿಸ್ತಾನದಲ್ಲಿ 4ಜಿ ಸ್ಪೀಡ್ 14mbps ಇದ್ರೆ, ಅಲ್ಜೀರಿಯಾದಲ್ಲಿ 4ಜಿ ವೇಗ 9mbps ಇದೆ. ಸಿಂಗಾಪುರದಲ್ಲಿ ಇಂಟರ್ನೆಟ್ ಸ್ಪೀಡ್ ಅತ್ಯಂತ ಹೆಚ್ಚಾಗಿದ್ದು, 44mbps ಇದೆ. ಎರಡನೇ ಸ್ಥಾನ ಪಡೆದಿರೋ ನೆದರ್ಲೆಂಡ್ ಕೂಡ 42mbps ಸ್ಪೀಡ್ ಇರೋ 4ಜಿ ಸೇವೆಯನ್ನು ಜನರಿಗೆ ನೀಡುತ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...