alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ.31 ರೊಳಗೆ ಮಾಡಿ ಮುಗಿಸಿ ಈ ಮಹತ್ವದ ಕೆಲಸ

2017-2018 ರ ಹಣಕಾಸು ವರ್ಷ ಮುಗಿಯಲು ಇನ್ನು 14 ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 31 ರೊಳಗೆ ಕೆಲವೊಂದು ಕೆಲಸಗಳನ್ನು ಮುಗಿಸುವ ಅವಶ್ಯಕತೆಯಿದೆ. ಆರ್ಥಿಕ ತಜ್ಞರ ಪ್ರಕಾರ ಮಾರ್ಚ್ 31ರೊಳಗೆ ಅವಶ್ಯಕ ಕೆಲಸಗಳನ್ನು ಮುಗಿಸದೆ ಹೋದ್ರೆ ವ್ಯಕ್ತಿ ತೆರಿಗೆ ಲಾಭದಿಂದ ವಂಚಿತನಾಗಲಿದ್ದಾನೆ. ಹಾಗಾಗಿ ಸುಕನ್ಯ ಸಮೃದ್ಧಿ ಯೋಜನೆ ಸೇರಿದಂತೆ ಕೆಲ ಖಾತೆಗಳಿಗೆ ಅವಶ್ಯವಾಗಿ ಹಣ ಹಾಕಬೇಕು ಎನ್ನುತ್ತಾರೆ ತಜ್ಞರು.

ಮಾರ್ಚ್ 29ರಂದು ಮಹಾವೀರ್ ಜಯಂತಿ. ಅಂದು ಬ್ಯಾಂಕ್ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ರಜೆ. ಮಾರ್ಚ್ 30 ಗುಡ್ ಫ್ರೈಡೆ. ಮಾರ್ಚ್ 31 ಬ್ಯಾಂಕ್ ಕ್ಲೋಸಿಂಗ್ ದಿನವಾಗಿದ್ದು, ಯಾವುದೇ ವಹಿವಾಟು ನಡೆಯುವುದಿಲ್ಲ. ಹಾಗಾಗಿ ಬ್ಯಾಂಕ್ ಕೆಲಸ ಮುಗಿಸಲು ಒಂದೇ ವಾರ ಬಾಕಿಯಿದೆ.

ನಿಮ್ಮ ಬಳಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಇದ್ದಲ್ಲಿ ಪ್ರತಿ ವರ್ಷ ಕನಿಷ್ಠ ಹಣ 500 ರೂಪಾಯಿ ತುಂಬಬೇಕಾಗುತ್ತದೆ. ಇದನ್ನು ಮಾರ್ಚ್ 31ರೊಳಗೆ ಜಮಾ ಮಾಡಿ.

ಹೆಣ್ಣು ಮಗುವಿಗಾಗಿ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹಣ ಹಾಕಿದ್ದರೆ ಪ್ರತಿ ವರ್ಷ 1000 ರೂಪಾಯಿ ಜಮಾ ಮಾಡಬೇಕಾಗುತ್ತದೆ. ಇದನ್ನು ಕೂಡ ಮಾರ್ಚ್ 31ರೊಳಗೆ ಜಮಾ ಮಾಡಿ.

ರಾಷ್ಟ್ರೀಯ ಪಿಂಚಣಿ ಯೋಜನೆ ವಾರ್ಷಿಕ ಹಣ 6 ಸಾವಿರ ರೂಪಾಯಿಯನ್ನು ಕೂಡ ಮಾರ್ಚ್ 31 ರೊಳಗೆ ತುಂಬಿ. ಈ ಕೆಲಸ ಮಾಡಲು ಮರೆಯಬೇಡಿ.

ಆದಾಯ ತೆರಿಗೆಯನ್ನು ಕೂಡ ಮಾರ್ಚ್ 31ರೊಳಗೆ ತುಂಬಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...